ಕೀರ್ತನೆಗಳು Chapter 103

For English

Read ಕೀರ್ತನೆಗಳು Chapter 103 Online

Read ಕೀರ್ತನೆಗಳು Chapter 103 online from the Holy Bible. This chapter is part of the Book of ಕೀರ್ತನೆಗಳು in the Old Testament. Browse every verse with easy chapter navigation, continue to the next chapter, or explore the complete Book of ಕೀರ್ತನೆಗಳು and the Holy Bible online.

Choose a Chapter

ಕೀರ್ತನೆಗಳು 103

ಅಧ್ಯಾಯ 103

1. ಓ ನನ್ನ ಮನವೇ, ಕರ್ತನನ್ನೂ ನನ್ನ ಎಲ್ಲಾ ಅಂತರಂಗವೇ, ಆತನ ಪರಿಶುದ್ಧವಾದ ಹೆಸರನ್ನೂ ಸ್ತುತಿಸು.

2. ಓ ನನ್ನ ಮನವೇ, ಕರ್ತನನ್ನು ಸ್ತುತಿಸು. ಆತನ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ.

3. ಆತನು ನಿನ್ನ ಅಪ ರಾಧಗಳನ್ನೆಲ್ಲಾ ಮನ್ನಿಸಿ ನಿನ್ನ ರೋಗಗಳನ್ನೆಲ್ಲಾ ಸ್ವಸ್ಥ ಮಾಡಿ

4. ನಿನ್ನ ಜೀವವನ್ನು ನಾಶದೊಳಗಿಂದ ವಿಮೋ ಚಿಸಿ ಪ್ರೀತಿ ಕೃಪೆಯನ್ನೂ ಅಂತಃಕರಣಗಳನ್ನೂ ನಿನಗೆ ಕಿರೀಟವಾಗಿ ಇಟ್ಟು

5. ನಿನ್ನ ಯೌವನವು ಹದ್ದಿನಂತೆ ಹೊಸದಾಗುವ ಹಾಗೆ ನಿನ್ನ ಬಾಯಿಯನ್ನು ಒಳ್ಳೇದ ರಿಂದ ತೃಪ್ತಿಪಡಿಸುತ್ತಾನೆ.

6. ಕುಗ್ಗಿಸಲ್ಪಡುವವರೆಲ್ಲರಿಗೆ ಕರ್ತನು ನೀತಿಯನ್ನೂ ನ್ಯಾಯವನ್ನೂ ನಡಿಸುತ್ತಾನೆ.

7. ಆತನು ತನ್ನ ಮಾರ್ಗಗಳನ್ನು ಮೋಶೆಗೂ ತನ್ನ ಕ್ರಿಯೆಗಳನ್ನು ಇಸ್ರಾಯೇಲಿನ ಮಕ್ಕಳಿಗೂ ತಿಳಿಯಮಾಡಿದನು.

8. ಕರ್ತನು ಅಂತಃಕರಣವೂ ದಯೆಯೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳವನಾಗಿದ್ದಾನೆ.

9. ಆತನು ಸದಾಕಾಲಕ್ಕೂ ಗದರಿಸುವದಿಲ್ಲ; ನಿತ್ಯವೂ ಕೋಪಿ ಸುವಾತನಲ್ಲ;

10. ನಮ್ಮ ಪಾಪಗಳಿಗೆ ತಕ್ಕಂತೆ ನಮಗೆ ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳ ಪ್ರಕಾರ ನಮ್ಮನ್ನು ದಂಡಿಸಲಿಲ್ಲ.

11. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನ ಕೃಪೆಯು ಆತನಿಗೆ ಭಯಪಡುವವರ ಮೇಲೆ ಅಷ್ಟು ಅಪಾರವಾಗಿದೆ.

12. ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ಅಷ್ಟು ದೂರ ಮಾಡಿದ್ದಾನೆ.

13. ತಂದೆಯು ಮಕ್ಕಳ ಮೇಲೆ ಅಂತಃಕರಣ ಪಡುವ ಪ್ರಕಾರ ಕರ್ತನು ತನಗೆ ಭಯಪಡುವವರ ಮೇಲೆ ಅಂತಃಕರಣಪಡುವವನಾಗಿದ್ದಾನೆ.

14. ಆತನು ನಮ್ಮ ಪ್ರಕೃತಿಯನ್ನು ತಿಳುಕೊಂಡು ನಾವು ಧೂಳಿ ಯಾಗಿದ್ದೇವೆಂದು ಜ್ಞಾಪಕಮಾಡಿಕೊಳ್ಳುತ್ತಾನೆ;

15. ಮನುಷ್ಯನ ದಿವಸಗಳೋ ಹುಲ್ಲಿನ ಹಾಗೆ ಅವೆ; ಅವನು ಹೊಲದ ಹೂವಿನ ಹಾಗೆಯೇ ಶೋಭಿಸುತ್ತಾನೆ.

16. ಆದಾಗ್ಯೂ ಗಾಳಿಯು ಅದರ ಮೇಲೆ ಬೀಸುತ್ತಲೇ ಅದು ಇಲ್ಲದೆ ಹೋಗುತ್ತದೆ; ಅದರ ಸ್ಥಳವು ಅದನ್ನು ಇನ್ನು ಅರಿಯದು.

17. ಆದರೆ ಕರ್ತನ ಕೃಪೆಯು ಆತನಿಗೆ ಭಯಪಡುವವರ ಮೇಲೆಯೂ ಆತನ ನೀತಿಯು ಮಕ್ಕಳ ಮಕ್ಕಳಿಗೂ

18. ಆತನ ಒಡಂಬಡಿಕೆಯನ್ನು ಕೈಕೊಂಡು ಆತನ ಕಟ್ಟಳೆಗಳನ್ನು ನೆನಸಿ ಅದರಂತೆ ಮಾಡುವವರಿಗೂ ನಿತ್ಯತ್ವದಿಂದ ನಿತ್ಯತ್ವಕ್ಕೂ ಇರುವದು.

19. ಕರ್ತನು ಆಕಾಶಗಳಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನ ರಾಜ್ಯವು ಎಲ್ಲರ ಮೇಲೆ ಆಳುತ್ತದೆ.

20. ಆತನ ದೂತರೇ, ಆತನ ಮಾತಿನ ಸ್ವರವನ್ನು ಕೇಳಿ, ಆತನ ಆಜ್ಞೆಗಳನ್ನು ನಡಿಸುವ ಶ್ರೇಷ್ಠರಾದ ಶೂರರೇ,

21. ಕರ್ತನನ್ನು ಸ್ತುತಿಸಿರಿ. ಆತನ ಎಲ್ಲಾ ಸೈನ್ಯಗಳೇ, ಆತನ ಇಷ್ಟವನ್ನು ನಡಿಸುವ ಆತನ ಸೇವಕರೇ, ಕರ್ತನನ್ನು ಸ್ತುತಿಸಿರಿ.

22. ಆತನ ಆಳಿಕೆಯ ಎಲ್ಲಾ ಸ್ಥಳಗಳಲ್ಲಿ ಇರುವ ಆತನ ಎಲ್ಲಾ ಕೆಲಸಗಳೇ. ಕರ್ತನನ್ನು ಸ್ತುತಿಸಿರಿ. ನನ್ನ ಮನವೇ, ಕರ್ತನನ್ನು ಸ್ತುತಿಸು.

About ಕೀರ್ತನೆಗಳು Chapter 103

Read ಕೀರ್ತನೆಗಳು Chapter 103 online from the Holy Bible. This chapter is part of the Book of ಕೀರ್ತನೆಗಳು in the Old Testament. Continue reading with the chapter navigation above or explore the complete book.

Book Information

Book: ಕೀರ್ತನೆಗಳು
Chapter: 103
Testament: Old Testament

How to Read this Chapter

Use the Previous and Next Chapter buttons to continue reading ಕೀರ್ತನೆಗಳು. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಕೀರ್ತನೆಗಳು Chapter 103 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಕೀರ್ತನೆಗಳು Chapter 103?

ಕೀರ್ತನೆಗಳು Chapter 103 is part of the Book of ಕೀರ್ತನೆಗಳು in the Holy Bible.

Can I read this chapter online?

Yes. You can read the complete ಕೀರ್ತನೆಗಳು Chapter 103 online for free with easy chapter navigation.

More Chapters from ಕೀರ್ತನೆಗಳು

  1. ಕೀರ್ತನೆಗಳು Chapter 5
  2. ಕೀರ್ತನೆಗಳು Chapter 94
  3. ಕೀರ್ತನೆಗಳು Chapter 147
  4. ಕೀರ್ತನೆಗಳು Chapter 44
  5. ಕೀರ್ತನೆಗಳು Chapter 145
  6. ಕೀರ್ತನೆಗಳು Chapter 110
  7. ಕೀರ್ತನೆಗಳು Chapter 55

Explore More from ಹಳೆಯ ಒಡಂಬಡಿಕೆ

  1. ಧರ್ಮೋಪದೇಶಕಾಂಡ Chapter 14
  2. ಧರ್ಮೋಪದೇಶಕಾಂಡ Chapter 6
  3. ಯೆಶಾಯ Chapter 61
  4. ಹಬಕ್ಕೂಕ್ಕ Chapter 1
  5. ಯೆರೆಮೀಯ Chapter 15
  6. ಯೆರೆಮೀಯ Chapter 35
  7. ಪ್ರಸಂಗಿ Chapter 3

Related Chapters & Readings

  1. ಯಾಜಕಕಾಂಡ Chapter 21
  2. ಹೋಶೇ Chapter 12
  3. ಅಪೊಸ್ತಲರ ಕೃತ್ಯಗಳು Chapter 19
  4. ಆದಿಕಾಂಡ Chapter 15
  5. 2 ಪೂರ್ವಕಾಲವೃತ್ತಾಂತ Chapter 8
  6. ಯೆರೆಮೀಯ Chapter 33
  7. ಕೀರ್ತನೆಗಳು Chapter 88
Share Your Love

Leave a Reply

Your email address will not be published. Required fields are marked *