Read 2 ಪೂರ್ವಕಾಲವೃತ್ತಾಂತ Chapter 24 Online
Read 2 ಪೂರ್ವಕಾಲವೃತ್ತಾಂತ Chapter 24 online from the Holy Bible. This chapter is part of the Book of 2 ಪೂರ್ವಕಾಲವೃತ್ತಾಂತ in the Old Testament. Browse every verse with easy chapter navigation, continue to the next chapter, or explore the complete Book of 2 ಪೂರ್ವಕಾಲವೃತ್ತಾಂತ and the Holy Bible online.
Choose a Chapter
2 ಪೂರ್ವಕಾಲವೃತ್ತಾಂತ 24
ಅಧ್ಯಾಯ 24
1. ಯೆಹೋವಾಷನು ಆಳಲು ಆರಂಭಿಸಿದಾಗ ಏಳು ವರುಷದವನಾಗಿದ್ದು ಯೆರೂ ಸಲೇಮಿನಲ್ಲಿ ನಾಲ್ವತ್ತು ವರುಷ ಆಳಿದನು. ಅವನ ತಾಯಿ ಬೇರ್ಷೆಬ ಊರಿನವಳಾದ ಚಿಬ್ಯಳೆಂಬವಳು.
2. ಯೆಹೋವಾಷನು ಯಾಜಕನಾದ ಯೆಹೋಯಾ ದನ ಸಮಸ್ತ ದಿವಸಗಳಲ್ಲಿ ಕರ್ತನ ಸಮ್ಮುಖದಲ್ಲಿ ಸರಿಯಾದದ್ದನ್ನು ಮಾಡಿದನು.
3. ಯೆಹೋಯಾ ದನು ಅವನಿಗೋಸ್ಕರ ಇಬ್ಬರು ಹೆಂಡತಿಯರನ್ನು ತಕ್ಕೊಂಡನು. ಅವನು ಕುಮಾರರನ್ನೂ ಕುಮಾರ್ತೆ ಯರನ್ನೂ ಪಡೆದನು.
4. ಇದರ ತರುವಾಯ ಏನಾಯಿತಂದರೆ, ಯೆಹೋ ವಾಷನು ಕರ್ತನ ಆಲಯವನ್ನು ದುರಸ್ತು ಮಾಡುವ ಮನಸ್ಸುಳ್ಳವನಾಗಿದ್ದನು.
5. ಆದದರಿಂದ ಅವನು ಯಾಜ ಕರನ್ನೂ ಲೇವಿಯರನ್ನೂ ಕೂಡಿಸಿಕೊಂಡು ಅವರಿಗೆನೀವು ಯೆಹೂದ ಪಟ್ಟಣಗಳಿಗೆ ಹೊರಟು ಹೋಗಿ ವರುಷ ವರುಷಕ್ಕೆ ನಿಮ್ಮ ದೇವರ ಆಲಯವನ್ನು ದುರಸ್ತು ಮಾಡುವದಕ್ಕೆ ಸಮಸ್ತ ಇಸ್ರಾಯೇಲ್ಯರಿಂದ ಹಣವನ್ನು ಕೂಡಿಸಿರಿ. ಕೆಲಸವನ್ನು ಶೀಘ್ರವಾಗಿ ನಡಿಸಿರಿ ಅಂದನು. ಆದಾಗ್ಯೂ ಲೇವಿಯರು ಅವಸರ ಮಾಡದೆ ಇದ್ದರು.
6. ಆಗ ಅರಸನು ಮುಖ್ಯಸ್ಥನಾದ ಯೆಹೋ ಯಾದನನ್ನು ಕರೇಕಳುಹಿಸಿ ಅವನಿಗೆ–ಕರ್ತನ ಸೇವಕ ನಾದ ಮೋಶೆಯೂ ಇಸ್ರಾಯೇಲಿನ ಸಭೆಯೂ ಸಾಕ್ಷಿಯ ಗುಡಾರದ ನಿಮಿತ್ತ ಆಜ್ಞಾಪಿಸಿದ ಕಾಣಿಕೆ ಯನ್ನು ಯೆಹೂದದಿಂದಲೂ ಯೆರೂಸಲೇಮಿ ನಿಂದಲೂ ಬರುವಂತೆ ಮಾಡಲು ನೀನು ಲೇವಿಯ ರನ್ನು ಯಾಕೆ ವಿಚಾರಿಸಲಿಲ್ಲ?
7. ಯಾಕಂದರೆ ಆ ದುಷ್ಟ ಸ್ತ್ರೀಯಾದ ಅತಲ್ಯಳ ಕುಮಾರರು ಕರ್ತನ ಆಲಯವನ್ನು ಒಡೆದು ಬಿಟ್ಟು ಕರ್ತನ ಆಲಯಕ್ಕೆ ಪ್ರತಿಷ್ಠೆಮಾಡಿ ದವುಗಳನ್ನೆಲ್ಲಾ ಬಾಳನಿಗೆ ಕೊಟ್ಟರು ಅಂದನು.
8. ಅರ ಸನ ಆಜ್ಞೆಯ ಮೇರೆಗೆ ಅವರು ಒಂದು ಪೆಟ್ಟಿಗೆಯನ್ನು ಮಾಡಿ ಕರ್ತನ ಆಲಯದ ಬಾಗಲಿನ ಹೊರಗೆ ಇಟ್ಟರು.
9. ದೇವರ ಸೇವಕನಾದ ಮೋಶೆಯು ಅರಣ್ಯ ದಲ್ಲಿ ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ ಕಾಣಿಕೆಯನ್ನು ಕರ್ತನಿಗೆ ತರಬೇಕೆಂದು ಯೆಹೂದದಲ್ಲಿಯೂ ಯೆರೂ ಸಲೇಮಿನಲ್ಲಿಯೂ ಪ್ರಕಟಮಾಡಿದರು.
10. ಆಗ ಎಲ್ಲಾ ಪ್ರಧಾನರೂ ಜನರೂ ಸಂತೋಷಪಟ್ಟು ತಕ್ಕೊಂಡು ಒಂದು ಪೆಟ್ಟಿಗೆಯೊಳಗೆ ತುಂಬುವಷ್ಟು ಹಾಕಿದರು.
11. ಪೆಟ್ಟಿಗೆಯು ಲೇವಿಯರ ಕೈಯಿಂದ ಅರಸನ ಆಸ್ಥಾನಕ್ಕೆ ತರಲ್ಪಟ್ಟಾಗ ಅದರಲ್ಲಿ ಬಹಳ ಹಣ ಕಾಣಿಸಿದ್ದರಿಂದ ಅರಸನ ಶಾಸ್ತ್ರಿಯೂ ಪ್ರಧಾನ ಯಾಜಕನ ಪರಿಚಾರ ಕನೂ ಬಂದು ಪೆಟ್ಟಿಗೆಯನ್ನು ಬರಿದುಮಾಡಿ ತಕ್ಕೊಂಡು ತಿರಿಗಿ ಅದರ ಸ್ಥಳಕ್ಕೆ ಒಯ್ದಿಟ್ಟರು. ಹೀಗೆಯೇ ಅವರು ಪ್ರತಿದಿನ ಮಾಡಿ ಹಣವನ್ನು ಬಹಳ ಕೂಡಿಸಿದರು.
12. ಆಗ ಅರಸನೂ ಯೆಹೋಯಾದನೂ ಅದನ್ನು ಕರ್ತನ ಆಲಯದ ಸೇವೆಯ ಕಾರ್ಯವನ್ನು ಮಾಡುವ ವರಿಗೆ ಕೊಟ್ಟು ಅವರಿಂದ ಮಾಡಿಸಿದನು. ಕರ್ತನ ಆಲಯವನ್ನು ದುರಸ್ತು ಪಡಿಸುವ ನಿಮಿತ್ತ ಕಲ್ಲು ಕಡಿಯುವವರನ್ನೂ ಬಡಿಗಿಯವರನ್ನೂ ಕೂಲಿಗೆ ಕರ ಕೊಂಡರು. ಕರ್ತನ ಆಲಯವನ್ನು ಭದ್ರಮಾಡುವ ನಿಮಿತ್ತ ಕಬ್ಬಿಣ ಹಿತ್ತಾಳೆ ಕೆಲಸ ಮಾಡುವವರನ್ನು ಕೂಲಿಗೆ ಕರಕೊಂಡರು.
13. ಹೀಗೆಯೇ ಕೆಲಸದವರು ಕೆಲಸವನ್ನು ನಡಿಸಿದ್ದರಿಂದ ಕೆಲಸವು ಅವರ ಕೈಯಿಂದ ಪೂರ್ಣ ವಾಯಿತು, ಅವರು ಕರ್ತನ ಆಲಯವನ್ನು ಇದ್ದ ಸ್ಥಿತಿಯಲ್ಲಿ ನಿಲ್ಲಿಸಿ ಅದನ್ನು ಬಲಪಡಿಸಿದರು.
14. ಅವರು ಅದನ್ನು ಮುಗಿಸಿದ ಮೇಲೆ ಮಿಕ್ಕ ಹಣವನ್ನು ಅರ ಸನ ಮುಂದೆಯೂ ಯೆಹೋಯಾದನ ಮುಂದೆಯೂ ತಂದರು. ಅದರಿಂದ ಕರ್ತನ ಆಲಯಕ್ಕೋಸ್ಕರ ಬಂಗಾ ರದ ಬೆಳ್ಳಿಪಾತ್ರೆಗಳಾದ ಸೇವೆಯ ಪಾತ್ರೆಗಳೂ ಅರ್ಪಣೆಯ ಪಾತ್ರೆಗಳೂ ಸೌಟುಗಳೂ ಮಾಡಲ್ಪ ಟ್ಟವು. ಯೆಹೋಯಾದನ ಸಮಸ್ತ ದಿವಸಗಳಲ್ಲಿ ಯಾವಾಗಲೂ ಕರ್ತನ ಆಲಯದಲ್ಲಿ ದಹನಬಲಿ ಗಳನ್ನು ಅರ್ಪಿಸಿದರು.
15. ಯೆಹೋಯಾದನು ಮುದುಕನಾಗಿ ದಿವಸಗಳು ತುಂಬಿ ಸತ್ತುಹೋದನು. ಅವನು ಸಾಯುವಾಗ ನೂರ ಮೂವತ್ತು ವರುಷಗಳುಳ್ಳವನಾಗಿದ್ದನು.
16. ಅವನು ದೇವರಿಗೋಸ್ಕರವಾಗಿಯೂ ಆತನ ಆಲಯಕ್ಕೋಸ್ಕರ ವಾಗಿಯೂ ಇಸ್ರಾಯೇಲಿನಲ್ಲಿ ಒಳ್ಳೇದನ್ನು ಮಾಡಿ ದ್ದದ್ದರಿಂದ ಅವರು ಅವನನ್ನು ದಾವೀದನ ಪಟ್ಟಣ ದಲ್ಲಿ ಅರಸುಗಳ ಬಳಿಯಲ್ಲಿ ಹೂಣಿಟ್ಟರು.
17. ಆದರೆ ಯೆಹೋಯಾದನು ಸತ್ತತರುವಾಯ ಯೆಹೂದದ ಪ್ರಧಾನರು ಬಂದು ಅರಸನಿಗೆ ಅಡ್ಡ ಬಿದ್ದರು. ಆಗ ಅರಸನು ಅವರ ಮಾತನ್ನು ಕೇಳಿದನು.
18. ಅವರು ತಮ್ಮ ಪಿತೃಗಳ ದೇವರಾದ ಕರ್ತನ ಆಲಯವನ್ನು ಬಿಟ್ಟು ತೋಪುಗಳನ್ನೂ ವಿಗ್ರಹಗಳನ್ನೂ ಸೇವಿಸಿದರು. ಆದಕಾರಣ ಅವರ ಈ ಅಪರಾಧದ ನಿಮಿತ್ತ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರೌದ್ರ ಬಂತು.
19. ಆದಾಗ್ಯೂ ಕರ್ತನು ತನ್ನ ಕಡೆಗೆ ಅವರನ್ನು ತಿರುಗಿಸುವದಕ್ಕೆ ಪ್ರವಾದಿಗಳನ್ನು ಅವರ ಬಳಿಗೆ ಕಳುಹಿಸಿದನು; ಇವರು ಅವರಿಗೆ ಸಾಕ್ಷಿಯಾಗಿ ಹೇಳಿದರು; ಆದರೆ ಅವರು ಕಿವಿಗೊಡದೆ ಹೋದರು.
20. ಆಗ ದೇವರ ಆತ್ಮನು ಯಾಜಕನಾಗಿ ರುವ ಯೆಹೋಯಾದನ ಮಗನಾದ ಜೆಕರ್ಯನ ಮೇಲೆ ಬಂದನು. ಅವನು ಜನರೊಳಗೆ ಎತ್ತರವಾದ ಸ್ಥಳದಲ್ಲಿ ನಿಂತು ಅವರಿಗೆ–ನೀವು ವೃದ್ಧಿಹೊಂದ ಕೂಡದ ಹಾಗೆ ಕರ್ತನ ಆಜ್ಞೆಗಳನ್ನು ವಿಾರುವದೇನು? ನೀವು ಕರ್ತನನ್ನು ಬಿಟ್ಟದ್ದರಿಂದ ಆತನು ನಿಮ್ಮನ್ನು ಬಿಟ್ಟಿದ್ದಾನೆಂದು ಕರ್ತನು ಹೇಳುತ್ತಾನೆ ಅಂದನು.
21. ಆದದರಿಂದ ಅವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಕರ್ತನ ಆಲಯದ ಅಂಗಳದಲ್ಲಿ ಅರಸನ ಅಪ್ಪಣೆಯಂತೆ ಅವನನ್ನು ಕಲ್ಲೆಸೆದು ಕೊಂದರು.
22. ಹಾಗೆಯೇ ಇವನ ತಂದೆಯಾದ ಯೆಹೋಯಾದನು ತನಗೆ ತೋರಿಸಿದ ಕೃಪೆಯನ್ನು ಜ್ಞಾಪಕಮಾಡದೆ ಅರಸನಾದ ಯೆಹೋವಾಷನು ಅವನ ಮಗನನ್ನು ಕೊಂದುಹಾಕಿದನು. ಇವನು ಸಾಯುವಾಗ–ಕರ್ತನು ನೋಡಿ ವಿಚಾರಿಸಲಿ ಎಂದು ಹೇಳಿದನು.
23. ವರುಷಾಂತ್ಯದಲ್ಲಿ ಏನಾಯಿತಂದರೆ, ಅರಾಮಿನ ಸೈನ್ಯದವರು ಅವನಿಗೆ ವಿರೋಧವಾಗಿ ಹೊರಟು ಯೆಹೂದಕ್ಕೂ ಯೆರೂಸಲೇಮಿಗೂ ಬಂದು ಜನರ ಪ್ರಧಾನರನ್ನು ಅವರೊಳಗಿಂದ ನಾಶಮಾಡಿ ಅವರಿಂದ ತೆಗೆದುಕೊಂಡ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿದರು.
24. ಅವರು ತಮ್ಮ ಪಿತೃಗಳ ದೇವರಾದ ಕರ್ತನನ್ನು ಬಿಟ್ಟದ್ದರಿಂದ ಅರಾಮ್ಯರು ಅಲ್ಪಜನವಾದ ಸೈನ್ಯದ ಸಂಗಡ ಬಂದಾಗ ಕರ್ತನು ಬಹು ಅಧಿಕ ವಾದ ಸೈನ್ಯವನ್ನು ಅವರ ಕೈಯಲ್ಲಿ ಒಪ್ಪಿಸಿದನು. ಹೀಗೆ ಅವರು ಯೆಹೋವಾಷನಿಗೆ ವಿರೋಧವಾಗಿ ನ್ಯಾಯ ತೀರ್ವಿಕೆ ಮಾಡಿದರು. ಅವನು ಕಠಿಣ ರೋಗದಲ್ಲಿ ಬಿದ್ದಿರುವಾಗ ಅವನನ್ನು ಬಿಟ್ಟುಹೋದರು.
25. ಅವರು ಅವನನ್ನು ಬಿಟ್ಟತರುವಾಯ ಯಾಜಕನಾದ ಯೆಹೋ ಯಾದನ ಮಕ್ಕಳ ರಕ್ತಾಪರಾಧದ ನಿಮಿತ್ತವಾಗಿ ಅವನ ಸ್ವಂತ ಸೇವಕರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಅವನು ಸಾಯುವ ಹಾಗೆ ಅವನ ಮಂಚದ ಮೇಲೆ ಅವನನ್ನು ಕೊಂದುಹಾಕಿದರು. ಅವರು ಅವ ನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಅರಸುಗಳ ಸಮಾಧಿಗಳ ಬಳಿಯಲ್ಲಿ ಅವನನ್ನು ಹೂಣಿ ಡಲಿಲ್ಲ.
26. ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ದವರಾರಂದರೆ, ಅಮ್ಮೋನ್ಯಳಾಗಿರುವ ಶಿಮ್ಗಾಳ ಮಗ ನಾದ ಜಾಬಾದನು, ಮೋವಾಬ್ಯಳಾಗಿರುವ ಶಿವ್ರೆಾ ತಳ ಮಗನಾದ ಯೆಹೋಜಾಬಾದನು.
27. ಆದರೆ ಅವನ ಕುಮಾರರನ್ನು ಕುರಿತೂ ಅವನ ಮೇಲೆ ಹಾಕಿದ ಭಾರಗಳನ್ನು ಕುರಿತೂ ದೇವರ ಆಲಯ ದುರಸ್ತು ಮಾಡುವದನ್ನು ಕುರಿತೂ ಇಗೋ, ಅವು ಅರಸುಗಳ ಚರಿತ್ರೆಯ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಅವನ ಮಗ ನಾದ ಅಮಚ್ಯನು ಅವನಿಗೆ ಬದಲಾಗಿ ಆಳಿದನು.
About 2 ಪೂರ್ವಕಾಲವೃತ್ತಾಂತ Chapter 24
Read 2 ಪೂರ್ವಕಾಲವೃತ್ತಾಂತ Chapter 24 online from the Holy Bible. This chapter is part of the Book of 2 ಪೂರ್ವಕಾಲವೃತ್ತಾಂತ in the Old Testament. Continue reading with the chapter navigation above or explore the complete book.
Book Information
Book: 2 ಪೂರ್ವಕಾಲವೃತ್ತಾಂತ
Chapter: 24
Testament: Old Testament
How to Read this Chapter
Use the Previous and Next Chapter buttons to continue reading 2 ಪೂರ್ವಕಾಲವೃತ್ತಾಂತ. You can also adjust the font size for comfortable reading and browse other books of the Bible using the navigation links.
More Resources
Continue Reading the Bible
Continue reading 2 ಪೂರ್ವಕಾಲವೃತ್ತಾಂತ Chapter 24 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is 2 ಪೂರ್ವಕಾಲವೃತ್ತಾಂತ Chapter 24?
2 ಪೂರ್ವಕಾಲವೃತ್ತಾಂತ Chapter 24 is part of the Book of 2 ಪೂರ್ವಕಾಲವೃತ್ತಾಂತ in the Holy Bible.
Can I read this chapter online?
Yes. You can read the complete 2 ಪೂರ್ವಕಾಲವೃತ್ತಾಂತ Chapter 24 online for free with easy chapter navigation.