ಆದಿಕಾಂಡ Chapter 9

For English

Read ಆದಿಕಾಂಡ Chapter 9 Online

Read ಆದಿಕಾಂಡ Chapter 9 online from the Holy Bible. This chapter is part of the Book of ಆದಿಕಾಂಡ in the Old Testament. Browse every verse with easy chapter navigation, continue to the next chapter, or explore the complete Book of ಆದಿಕಾಂಡ and the Holy Bible online.

Choose a Chapter

ಆದಿಕಾಂಡ 9

ಅಧ್ಯಾಯ 9

1. ದೇವರು ನೋಹನನ್ನೂ ಅವನ ಕುಮಾರರನ್ನೂ ಆಶೀರ್ವದಿಸಿ ಅವರಿಗೆ–ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿ ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.

2. ಭೂಮಿಯ ಮೇಲಿರುವ ಎಲ್ಲಾ ಮೃಗಗಳ ಮೇಲೆಯೂ ಆಕಾಶದ ಎಲ್ಲಾ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಹರಿದಾಡುವವು ಗಳೆಲ್ಲವುಗಳ ಮೇಲೆಯೂ ಸಮುದ್ರದ ಎಲ್ಲಾ ವಿಾನುಗಳ ಮೇಲೆಯೂ ನಿಮ್ಮ ಭಯವು ಮತ್ತು ನಿಮ್ಮ ಹೆದರಿಕೆಯು ಇರುವದು; ನಿಮ್ಮ ಕೈಗಳಲ್ಲಿ ಅವು ಕೊಡಲ್ಪಟ್ಟಿವೆ.

3. ಚಲಿಸುವ ಜೀವಜಂತುಗಳೆಲ್ಲಾ ನಿಮಗೆ ಆಹಾರವಾಗಿ ಇರಲಿ, ಹಸುರು ಪಲ್ಯಗಳ ಹಾಗೆಯೇ ಅವುಗಳನ್ನೆಲ್ಲಾ ನಾನು ನಿಮಗೆ ಕೊಟ್ಟಿದ್ದೇನೆ.

4. ಆದರೆ ಮಾಂಸವನ್ನು ಜೀವವಿರುವ ರಕ್ತದೊಂದಿಗೆ ನೀವು ತಿನ್ನಬಾರದು.

5. ಇದಲ್ಲದೆ ನಿಮ್ಮ ಪ್ರಾಣಗಳಿಗೋಸ್ಕರ ನಿಮ್ಮ ರಕ್ತವನ್ನು ನಾನು ಖಂಡಿತವಾಗಿಯೂ ವಿಚಾರಿಸುವೆನು.

6. ಎಲ್ಲಾ ಮೃಗಗಳಿಂದ ಅದನ್ನು ವಿಚಾರಿಸುವೆನು. ಮನುಷ್ಯನ ಪ್ರಾಣವನ್ನು ಮನುಷ್ಯನಿಂದಲೂ ಅವ ನವನ ಸಹೋದರನಿಂದಲೂ ವಿಚಾರಿಸುವೆನು. ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವು ಮನುಷ್ಯನಿಂದಲೇ ಸುರಿಸಲ್ಪಡುವದು. ಯಾಕಂದರೆ ದೇವರು ತನ್ನ ಸ್ವರೂಪದಲ್ಲಿ ಮನುಷ್ಯ ನನ್ನು ಉಂಟುಮಾಡಿದನು.

7. ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂಮಿಯಲ್ಲಿ ಅಧಿಕವಾಗಿ ಹುಟ್ಟಿ ಅದರಲ್ಲಿ ಹೆಚ್ಚಿರಿ ಎಂದು ಹೇಳಿದನು.

8. ಇದಲ್ಲದೆ ದೇವರು ನೋಹನಿಗೂ ಅವನ ಸಂಗಡವಿರುವ ಅವನ ಕುಮಾರರಿಗೂ ಹೇಳಿದ್ದೇ ನಂದರೆ–

9. ಇಗೋ, ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡಲೂ ನಿಮ್ಮ ತರುವಾಯ ನಿಮ್ಮ ಸಂತತಿ ಯವರ ಸಂಗಡಲೂ

10. ನಾವೆಯೊಳಗಿಂದ ಹೊರಗೆ ಬಂದ ಎಲ್ಲವುಗಳ ಅಂದರೆ ಭೂಮಿಯ ಎಲ್ಲಾ ಜೀವಿಗಳ ಸಹಿತ ಪಕ್ಷಿಗಳೊಂದಿಗೂ ಪಶುಗಳೊಂದಿಗೂ ಭೂಮಿಯ ಎಲ್ಲಾ ಮೃಗಗಳೊಂದಿಗೂ ನಿಮ್ಮ ಕೂಡ ಇರುವ ಎಲ್ಲಾ ಜೀವಜಂತುಗಳೊಂದಿಗೂ

11. ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡ ಸ್ಥಾಪಿಸುತ್ತೇನೆ. ಅದೇನಂದರೆ, ಇನ್ನು ಮೇಲೆ ಜಲಪ್ರಳಯದಿಂದ ಶರೀರಗಳಾವವೂ ನಾಶವಾಗುವದಿಲ್ಲ. ಭೂಮಿಯನ್ನು ಹಾಳುಮಾಡುವದಕ್ಕೆ ಇನ್ನು ಜಲಪ್ರಳಯವು ಇರುವ ದಿಲ್ಲ ಎಂಬದೇ.

12. ದೇವರು–ನನಗೂ ನಿಮಗೂ ನಿಮ್ಮ ಸಂಗಡ ಇರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ತಲತಲಾಂತರಗಳ ವರೆಗೆ ನಾನು ಮಾಡುವ ಒಡಂಬಡಿಕೆಗೆ ಇದೇ ಗುರುತು.

13. ನನ್ನ ಬಿಲ್ಲು ಮೇಘಗಳಲ್ಲಿ ಇಟ್ಟಿದ್ದೇನೆ. ಅದು ನನಗೂ ಭೂಮಿಗೂ ಮಾಡಿಕೊಂಡ ಒಡಂಬಡಿಕೆಗೆ ಗುರುತಾಗಿರುವದು.

14. ನಾನು ಭೂಮಿಯ ಮೇಲೆ ಮೇಘಗಳನ್ನು ಬರ ಮಾಡುವಾಗ ಆ ಬಿಲ್ಲು ಮೇಘಗಳಲ್ಲಿ ಕಾಣುವದು.

15. ಆಗ ನಾನು ನನಗೂ ನಿಮಗೂ ದೇಹಗಳಿರುವ ಎಲ್ಲಾ ಜೀವಜಂತುಗಳಿಗೂ ಮಧ್ಯೆ ಇರುವ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಶರೀರಗಳನ್ನೆಲ್ಲಾ ನಾಶಮಾಡುವ ಜಲಪ್ರಳಯವಾ ಗುವದೇ ಇಲ್ಲ.

16. ಆ ಬಿಲ್ಲು ಮೇಘಗಳಲ್ಲಿರುವಾಗ ದೇವರಾದ ನನಗೂ ಭೂಮಿಯ ಮೇಲಿರುವ ದೇಹಗಳುಳ್ಳ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ನಿತ್ಯವಾಗಿರುವ ಒಡಂಬಡಿಕೆಯನ್ನು ಜ್ಞಾಪಕಮಾಡಿ ಕೊಳ್ಳುವ ಹಾಗೆ ನಾನು ಅದನ್ನು ನೋಡುವೆನು ಅಂದನು.

17. ದೇವರು ನೋಹನಿಗೆ–ನಾನು ನನಗೂ ಭೂಮಿಯ ಮೇಲಿರುವ ಎಲ್ಲಾ ದೇಹಗಳಿಗೂ ಮಧ್ಯ ದಲ್ಲಿ ಸ್ಥಾಪಿಸಿದ ಒಡಂಬಡಿಕೆಯ ಗುರುತು ಇದೇ ಎಂದು ಹೇಳಿದನು.

18. ನಾವೆಯೊಳಗಿನಿಂದ ಹೊರಟು ಬಂದ ನೋಹನ ಕುಮಾರರು ಯಾರಂದರೆ, ಶೇಮ್‌ ಹಾಮ್‌ ಯೆಫೆತ್‌; ಹಾಮನು ಕಾನಾನನ ತಂದೆಯು.

19. ಈ ಮೂವರು ನೋಹನ ಮಕ್ಕಳು. ಇವರಿಂದ ಭೂಮಿಯಲ್ಲೆಲ್ಲಾ ಜನರು ವಿಸ್ತರಿಸಿದರು.

20. ನೋಹನು ವ್ಯವಸಾಯಗಾರನಾಗುವದಕ್ಕೆ ಪ್ರಾರಂಭಿಸಿ ಒಂದು ದ್ರಾಕ್ಷೇತೋಟವನ್ನು ಮಾಡಿದನು.

21. ಅವನು ದ್ರಾಕ್ಷಾರಸವನ್ನು ಕುಡಿದು ಅಮಲೇರಿ ತನ್ನ ಗುಡಾರದಲ್ಲಿ ಬೆತ್ತಲೆಯಾಗಿದ್ದನು.

22. ಕಾನಾನನ ತಂದೆಯಾದ ಹಾಮನು ತನ್ನ ತಂದೆಯ ಬೆತ್ತಲೆತನವನ್ನು ನೋಡಿ ಹೊರಗಿದ್ದ ತನ್ನ ಸಹೋದರರಿಬ್ಬರಿಗೆ ತಿಳಿಸಿ ದನು.

23. ಆಗ ಶೇಮನೂ ಯೆಫೆತನೂ ಬಟ್ಟೆಯನ್ನು ತಕ್ಕೊಂಡು ತಮ್ಮಿಬ್ಬರ ಹೆಗಲಿನ ಮೇಲೆ ಇಟ್ಟು ಹಿಂಭಾಗವಾಗಿ ಹೋಗಿ ತಮ್ಮ ತಂದೆಯ ಬೆತ್ತಲೆತನವನ್ನು ಮುಚ್ಚಿದರು. ಅವರ ಮುಖಗಳು ಹಿಂಭಾಗವಾಗಿದ್ದ ದರಿಂದ ತಮ್ಮ ತಂದೆಯ ಬೆತ್ತಲೆತನವನ್ನು ಅವರು ನೋಡಲಿಲ್ಲ.

24. ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚತ್ತು ತನ್ನ ಚಿಕ್ಕಮಗನು ತನಗೆ ಮಾಡಿದ್ದನ್ನು ತಿಳಿದು ಅವನು–

25. ಕಾನಾನನು ಶಾಪಗ್ರಸ್ತನಾಗಲಿ. ಅವನು ತನ್ನ ಸಹೋದರರಿಗೆ ದಾಸಾನುದಾಸನಾ ಗಿರುವನು ಅಂದನು. ಅವನು–

26. ಶೇಮನ ದೇವ ರಾದ ಕರ್ತನು ಸ್ತುತಿಸಲ್ಪಡಲಿ; ಕಾನಾನನು ಅವನಿಗೆ ದಾಸನಾಗಿರಲಿ.

27. ಯೆಫೆತನನ್ನು ದೇವರು ವಿಸ್ತರಿಸಲಿ; ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ; ಕಾನಾನನು ಅವನಿಗೆ ದಾಸನಾಗಿರಲಿ ಅಂದನು.

28. ಪ್ರಳಯವಾದ ಮೇಲೆ ನೋಹನು ಮೂನ್ನೂರ ಐವತ್ತು ವರುಷ ಬದುಕಿದನು.

29. ನೋಹನ ದಿನ ಗಳೆಲ್ಲಾ ಒಟ್ಟು ಒಂಭೈನೂರ ಐವತ್ತು ವರುಷ ಗಳಾಗಿದ್ದವು. ತರುವಾಯ ಅವನು ಸತ್ತನು.

About ಆದಿಕಾಂಡ Chapter 9

Read ಆದಿಕಾಂಡ Chapter 9 online from the Holy Bible. This chapter is part of the Book of ಆದಿಕಾಂಡ in the Old Testament. Continue reading with the chapter navigation above or explore the complete book.

Book Information

Book: ಆದಿಕಾಂಡ
Chapter: 9
Testament: Old Testament

How to Read this Chapter

Use the Previous and Next Chapter buttons to continue reading ಆದಿಕಾಂಡ. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಆದಿಕಾಂಡ Chapter 9 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಆದಿಕಾಂಡ Chapter 9?

ಆದಿಕಾಂಡ Chapter 9 is part of the Book of ಆದಿಕಾಂಡ in the Holy Bible.

Can I read this chapter online?

Yes. You can read the complete ಆದಿಕಾಂಡ Chapter 9 online for free with easy chapter navigation.

More Chapters from ಆದಿಕಾಂಡ

  1. ಆದಿಕಾಂಡ Chapter 44
  2. ಆದಿಕಾಂಡ Chapter 18
  3. ಆದಿಕಾಂಡ Chapter 3
  4. ಆದಿಕಾಂಡ Chapter 38
  5. ಆದಿಕಾಂಡ Chapter 34
  6. ಆದಿಕಾಂಡ Chapter 33
  7. ಆದಿಕಾಂಡ Chapter 17

Explore More from ಹಳೆಯ ಒಡಂಬಡಿಕೆ

  1. ಕೀರ್ತನೆಗಳು Chapter 35
  2. ವಿಮೋಚನಕಾಂಡ Chapter 25
  3. ಯೆರೆಮೀಯ Chapter 2
  4. ಆದಿಕಾಂಡ Chapter 27
  5. ಯೆಹೆಜ್ಕೇಲನು Chapter 32
  6. ಕೀರ್ತನೆಗಳು Chapter 13
  7. ಎಜ್ರನು Chapter 4

Related Chapters & Readings

  1. ಯೆಶಾಯ Chapter 56
  2. ಕೀರ್ತನೆಗಳು Chapter 73
  3. ಲೂಕನು Chapter 14
  4. ಕೀರ್ತನೆಗಳು Chapter 119
  5. ಧರ್ಮೋಪದೇಶಕಾಂಡ Chapter 24
  6. ಯೆಶಾಯ Chapter 9
  7. ಮೀಕ Chapter 5
Share Your Love

Leave a Reply

Your email address will not be published. Required fields are marked *