Read ಆದಿಕಾಂಡ Chapter 34 Online
Read ಆದಿಕಾಂಡ Chapter 34 online from the Holy Bible. This chapter is part of the Book of ಆದಿಕಾಂಡ in the Old Testament. Browse every verse with easy chapter navigation, continue to the next chapter, or explore the complete Book of ಆದಿಕಾಂಡ and the Holy Bible online.
Choose a Chapter
ಆದಿಕಾಂಡ 34
ಅಧ್ಯಾಯ 34
1. ಲೇಯಳು ಯಾಕೋಬನಿಗೆ ಹೆತ್ತ ಮಗಳಾದ ದೀನಳು ದೇಶದ ಸ್ತ್ರೀಯರನ್ನು ನೋಡುವ ದಕ್ಕಾಗಿ ಹೊರಗೆ ಹೋದಳು.
2. ದೇಶದ ಪ್ರಭುವಾಗಿದ್ದ ಹಿವ್ವಿಯನಾದ ಹಮೋರನ ಮಗನಾದ ಶೆಕೆಮನು ಆಕೆಯನ್ನು ನೋಡಿ ತೆಗೆದುಕೊಂಡು ಹೋಗಿ ಕೂಡಿ ಅಶುದ್ಧ ಮಾಡಿದನು.
3. ಅವನ ಮನಸ್ಸು ಯಾಕೋಬನ ಮಗಳಾದ ದೀನಳನ್ನು ಅಂಟಿಕೊಂಡಿತ್ತು. ಅವನು ಆ ಹುಡುಗಿಯನ್ನು ಪ್ರೀತಿಮಾಡಿ ಆಕೆಯೊಂದಿಗೆ ದಯೆ ಯಿಂದ ಮಾತನಾಡಿದನು.
4. ಶೆಕೆಮನು ತನ್ನ ತಂದೆ ಯಾದ ಹಮೋರನಿಗೆ–ಈ ಹುಡುಗಿಯನ್ನು ನನಗೆ ಹೆಂಡತಿಯಾಗಿರುವಂತೆ ತಕ್ಕೋ ಅಂದನು.
5. ಯಾಕೋ ಬನು ತನ್ನ ಮಗಳಾದ ದೀನಳನ್ನು ಶೆಕೆಮನು ಅಶುದ್ಧ ಮಾಡಿದನೆಂದು ಕೇಳಿದಾಗ ಅವನ ಮಕ್ಕಳು ದನಗಳ ಸಂಗಡ ಹೊಲದಲ್ಲಿದ್ದರು. ಅವರು ಬರುವ ವರೆಗೆ ಯಾಕೋಬನು ಸುಮ್ಮನಿದ್ದನು.
6. ಆಗ ಶೆಕೆಮನ ತಂದೆಯಾದ ಹಮೋರನು ಹೊರಗೆ ಯಾಕೋಬನ ಸಂಗಡ ಮಾತನಾಡುವದಕ್ಕೆ ಬಂದನು.
7. ಯಾಕೋಬನ ಮಕ್ಕಳು ಅದನ್ನು ಕೇಳಿದಾಗ ಅವರು ಹೊಲದಿಂದ ಬಂದರು. ಶೆಕೆಮನು ಯಾಕೋಬನ ಮಗಳ ಸಂಗಡ ಮಲಗಿ ಇಸ್ರಾಯೇಲಿ ನಲ್ಲಿ ಅವಮಾನಕರವಾದದ್ದನ್ನು ಮಾಡಿದ್ದರಿಂದ ಆ ಮನುಷ್ಯರು ವ್ಯಸನಪಟ್ಟು ಬಹಳ ಉರಿಗೊಂಡರು. ಅದು ಹಾಗೆ ಆಗಬಾರದಾಗಿತ್ತು.
8. ಹಮೋರನು ಅವರಿಗೆ–ನನ್ನ ಮಗನಾದ ಶೆಕೆಮನ ಮನಸ್ಸು ನಿಮ್ಮ ಮಗಳಿಗಾಗಿ ಆಶಿಸುತ್ತದೆ. ಆಕೆಯನ್ನು ಅವನಿಗೆ ಹೆಂಡತಿಯಾಗಿ ಕೊಡಿರಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ;
9. ನೀವು ನಮ್ಮೊಂದಿಗೆ ಮದುವೆ ಗಳನ್ನು ಮಾಡಿರಿ; ನಿಮ್ಮ ಕುಮಾರ್ತೆಯರನ್ನು ನಮಗೆ ಕೊಡಿರಿ, ನಮ್ಮ ಕುಮಾರ್ತೆಯರನ್ನು ನೀವು ತಕ್ಕೊಳ್ಳಿರಿ.
10. ಇದಲ್ಲದೆ ನೀವು ನಮ್ಮ ಸಂಗಡ ವಾಸಮಾಡಿರಿ; ದೇಶವು ನಿಮ್ಮ ಮುಂದೆ ಇದೆ. ನೀವು ವಾಸಿಸಿ ಅದರಲ್ಲಿ ವ್ಯಾಪಾರಮಾಡಿ ಅದರಿಂದ ಆಸ್ತಿಯನ್ನು ಮಾಡಿಕೊಳ್ಳಿರಿ ಅಂದನು.
11. ಶೆಕೆಮನು ಆಕೆಯ ತಂದೆಗೂ ಸಹೋದರರಿಗೂ ಹೇಳಿದ್ದೇನಂದರೆ–ನಿಮ್ಮ ದೃಷ್ಟಿಯಲ್ಲಿ ನನಗೆ ಕೃಪೆ ದೊರಕಲಿ; ನೀವು ನನಗೆ ಹೇಳಿದ್ದನ್ನು ನಾನು ನಿಮಗೆ ಕೊಡುವೆನು.
12. ತೆರವನ್ನೂ ಕಾಣಿಕೆಯನ್ನೂ ಯಥೇಚ್ಛವಾಗಿ ನನ್ನನ್ನು ಕೇಳಿರಿ. ನೀವು ಹೇಳುವ ಪ್ರಕಾರ ಕೊಡುವೆನು. ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ ಅಂದನು.
13. ಆಗ ಯಾಕೋಬನ ಮಕ್ಕಳು ಶೆಕೆಮನಿಗೂ ಅವನ ತಂದೆಯಾದ ಹಮೋರನಿಗೂ ವಂಚನೆಯ ಉತ್ತರವನ್ನು ಕೊಟ್ಟರು. ಅವನು ತಮ್ಮ ತಂಗಿಯಾದ ದೀನಳನ್ನು ಅಶುದ್ಧಮಾಡಿದ್ದನು.
14. ಯಾಕೋಬನ ಮಕ್ಕಳು ಅವರಿಗೆ–ನಾವು ಈ ಕಾರ್ಯವನ್ನು ಮಾಡಲಾರೆವು, ಸುನ್ನತಿಯಿಲ್ಲದ ಮನುಷ್ಯನಿಗೆ ನಮ್ಮ ತಂಗಿಯನ್ನು ಕೊಡಲಾರೆವು, ಅದು ನಮಗೆ ಅವಮಾನ.
15. ಆದರೆ ನೀವು ನಮ್ಮ ಹಾಗಿದ್ದು ನಿಮ್ಮಲ್ಲಿರುವ ಗಂಡಸರೆಲ್ಲಾ ಸುನ್ನತಿಮಾಡಿಸಿಕೊಂಡರೆ ಮಾತ್ರ ನಾವು ಒಪ್ಪುವೆವು.
16. ನಮ್ಮ ಕುಮಾರ್ತೆಯರನ್ನು ನಿಮಗೆ ಕೊಟ್ಟು ನಿಮ್ಮ ಕುಮಾರ್ತೆಯರನ್ನು ತಕ್ಕೊಳ್ಳುವೆವು. ಇದಲ್ಲದೆ ನಾವು ನಿಮ್ಮಲ್ಲಿ ವಾಸಮಾಡಿ ಒಂದೇ ಜನಾಂಗವಾಗುವೆವು;
17. ಆದರೆ ನೀವು ನಮ್ಮ ಮಾತನ್ನು ಕೇಳಿ ಸುನ್ನತಿಮಾಡಿಸಿಕೊಳ್ಳದೆ ಹೋದರೆ ನಮ್ಮ ಮಗಳನ್ನು ನಾವು ತೆಗೆದುಕೊಂಡು ಹೋಗಿ ಬಿಡುತ್ತೇವೆ ಎಂದು ಹೇಳಿದರು.
18. ಅವರ ಮಾತುಗಳು ಹಮೋರನಿಗೂ ಅವನ ಮಗನಾದ ಶೆಕೆಮನಿಗೂ ಮೆಚ್ಚಿಕೆಯಾದವುಗಳಾಗಿ ಕಂಡವು.
19. ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿದ್ದರಿಂದ ಆ ಕಾರ್ಯವನ್ನು ಮಾಡು ವದಕ್ಕೆ ಹಿಂಜರಿಯಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು.
20. ಆಗ ಹಮೋರನೂ ಅವನ ಮಗನಾದ ಶೆಕೆಮನೂ ತಮ್ಮ ಪಟ್ಟಣ ದ್ವಾರದ ಬಳಿಗೆ ಬಂದು ತಮ್ಮ ಪಟ್ಟಣದ ಜನರ ಸಂಗಡ ಮಾತನಾಡಿ ಅವರಿಗೆ–
21. ಈ ಮನುಷ್ಯರು ನಮ್ಮ ಸಂಗಡ ಸಮಾಧಾನ ವಾಗಿದ್ದಾರೆ; ಆದದರಿಂದ ಅವರು ದೇಶದಲ್ಲಿ ವಾಸಮಾಡಿ ಅದರಲ್ಲಿ ವ್ಯಾಪಾರಮಾಡಲಿ. ಇಗೋ, ದೇಶವು ಅವರಿಗಾಗಿ ಸಾಕಷ್ಟು ವಿಸ್ತಾರವಾಗಿದೆ. ಅವರ ಕುಮಾರ್ತೆಯರನ್ನು ನಮಗೆ ಹೆಂಡತಿಯರನ್ನಾಗಿ ತಕ್ಕೊಳ್ಳೋಣ ನಮ್ಮ ಕುಮಾರ್ತೆಯರನ್ನು ಅವರಿಗೆ ಕೊಡೋಣ.
22. ಅವರು ಸುನ್ನತಿಮಾಡಿಸಿಕೊಂಡ ಪ್ರಕಾರ ನಮ್ಮಲ್ಲಿ ಗಂಡಸರೆಲ್ಲಾ ಸುನ್ನತಿಮಾಡಿಸಿ ಕೊಂಡರೆ ಮಾತ್ರ ಆ ಮನುಷ್ಯರು ನಮ್ಮ ಸಂಗಡ ವಾಸಮಾಡುವದಕ್ಕೂ ಒಂದೇ ಜನಾಂಗವಾಗುವದಕ್ಕೂ ಒಪ್ಪುವರು.
23. ಅವರ ಮಂದೆಗಳೂ ಸಂಪತ್ತೂ ದನಗಳೆಲ್ಲಾ ನಮ್ಮವುಗಳಲ್ಲವೋ? ಅವರಿಗೆ ನಾವು ಒಪ್ಪಿಕೊಂಡರೆ ಮಾತ್ರ ಅವರು ನಮ್ಮ ಸಂಗಡ ವಾಸಿಸುವರು ಅಂದರು.
24. ಆಗ ಪಟ್ಟಣದ ದ್ವಾರದಲ್ಲಿ ಹೋಗುವವರೆಲ್ಲಾ ಹಮೋರನೂ ಅವನ ಮಗನಾದ ಶೆಕೆಮನೂ ಹೇಳಿದ ಮಾತುಗಳನ್ನು ಕೇಳಿ ಅವನ ಪಟ್ಟಣ ದ್ವಾರದಲ್ಲಿ ಹೋಗುವ ಎಲ್ಲಾ ಗಂಡಸರು ಸುನ್ನತಿಮಾಡಿಸಿಕೊಂಡರು.
25. ಮೂರನೆಯ ದಿನದಲ್ಲಿ ಅವರಿಗೆ ನೋವು ಉಂಟಾದಾಗ ಯಾಕೋಬನ ಮಕ್ಕಳಲ್ಲಿ ಇಬ್ಬರು ಅಂದರೆ ದೀನಳ ಸಹೋದರರಾದ ಸಿಮೆಯೋನನೂ ಲೇವಿಯೂ ತಮ್ಮ ತಮ್ಮ ಕತ್ತಿಗಳನ್ನು ತಕ್ಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು ಗಂಡಸರನ್ನೆಲ್ಲಾ ಕೊಂದುಹಾಕಿದರು.
26. ಹಮೋರನನ್ನೂ ಅವನ ಮಗ ನಾದ ಶೆಕೆಮನನ್ನೂ ಕತ್ತಿಯಿಂದ ಕೊಂದುಹಾಕಿ ದೀನಳನ್ನು ಶೆಕೆಮನ ಮನೆಯಿಂದ ತಕ್ಕೊಂಡು ಹೊರಗೆ ಹೋದರು.
27. ತಮ್ಮ ಸಹೋದರಿಯನ್ನು ಅಶುದ್ಧ ಮಾಡಿದ್ದರಿಂದ ಯಾಕೋಬನ ಮಕ್ಕಳು ಕೊಂದವರ ಬಳಿಗೆ ಬಂದು ಕೊಳ್ಳೆಹೊಡೆದರು.
28. ಅವರ ಕುರಿ, ದನ, ಕತ್ತೆಗಳನ್ನು ಪಟ್ಟಣದಲ್ಲಿಯೂ ಹೊಲದಲ್ಲಿಯೂ ಇದ್ದವುಗಳೆಲ್ಲವನ್ನು ತಕ್ಕೊಂಡರು.
29. ಅವರ ಎಲ್ಲಾ ಆಸ್ತಿಯನ್ನೂ ಅವರ ಎಲ್ಲಾ ಚಿಕ್ಕಮಕ್ಕಳನ್ನೂ ಅವರ ಹೆಂಡತಿಯರನ್ನೂ ಸೆರೆಹಿಡಿದು ಮನೆಯಲ್ಲಿದದ್ದೆ ಲ್ಲವನ್ನೂ ಅವರು ಕೊಳ್ಳೆಹೊಡೆದರು.
30. ಆಗ ಯಾಕೋಬನು ಸಿಮೆಯೋನನಿಗೂ ಲೇವಿಗೂ ಹೇಳಿದ್ದೇನಂದರೆ–ನೀವು ನನ್ನನ್ನು ದೇಶದ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ದುರ್ವಾಸನೆಯಾಗುವಂತೆ ಮಾಡಿ ನನ್ನನ್ನು ಕಳವಳಪಡಿ ಸಿದಿರಿ; ನಾನು ಸ್ವಲ್ಪ ಮಂದಿಯುಳ್ಳವನು, ಹೀಗಿರುವಲ್ಲಿ ಅವರು ನನಗೆ ವಿರೋಧವಾಗಿ ಕೂಡಿಕೊಂಡು ನನ್ನನ್ನು ಕೊಲ್ಲುವರು. ಆಗ ನಾನೂ ನನ್ನ ಮನೆಯವರೂ ನಾಶವಾಗುವೆವು ಅಂದನು.
31. ಆದರೆ ಅವರುನಮ್ಮ ತಂಗಿಯೊಂದಿಗೆ ಸೂಳೆಯಂತೆ ವರ್ತಿಸಬಹುದೋ ಅಂದರು.
About ಆದಿಕಾಂಡ Chapter 34
Read ಆದಿಕಾಂಡ Chapter 34 online from the Holy Bible. This chapter is part of the Book of ಆದಿಕಾಂಡ in the Old Testament. Continue reading with the chapter navigation above or explore the complete book.
Book Information
Book: ಆದಿಕಾಂಡ
Chapter: 34
Testament: Old Testament
How to Read this Chapter
Use the Previous and Next Chapter buttons to continue reading ಆದಿಕಾಂಡ. You can also adjust the font size for comfortable reading and browse other books of the Bible using the navigation links.
More Resources
Continue Reading the Bible
Continue reading ಆದಿಕಾಂಡ Chapter 34 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is ಆದಿಕಾಂಡ Chapter 34?
ಆದಿಕಾಂಡ Chapter 34 is part of the Book of ಆದಿಕಾಂಡ in the Holy Bible.
Can I read this chapter online?
Yes. You can read the complete ಆದಿಕಾಂಡ Chapter 34 online for free with easy chapter navigation.
More Chapters from ಆದಿಕಾಂಡ
- ಆದಿಕಾಂಡ Chapter 44
- ಆದಿಕಾಂಡ Chapter 40
- ಆದಿಕಾಂಡ Chapter 38
- ಆದಿಕಾಂಡ Chapter 33
- ಆದಿಕಾಂಡ Chapter 23
- ಆದಿಕಾಂಡ Chapter 18
- ಆದಿಕಾಂಡ Chapter 3
Explore More from ಹಳೆಯ ಒಡಂಬಡಿಕೆ
- ಅರಣ್ಯಕಾಂಡ Chapter 5
- ಪ್ರಲಾಪಗಳು Chapter 4
- ಪ್ರಸಂಗಿ Chapter 12
- 1 ಸಮುವೇಲನು Chapter 20
- ಯೆರೆಮೀಯ Chapter 9
- 1 ಸಮುವೇಲನು Chapter 14
- ಯಾಜಕಕಾಂಡ Chapter 19