Read 2 ಕೊರಿಂಥದವರಿಗೆ Chapter 8 Online
Read 2 ಕೊರಿಂಥದವರಿಗೆ Chapter 8 online from the Holy Bible. This chapter is part of the Book of 2 ಕೊರಿಂಥದವರಿಗೆ in the New Testament. Browse every verse with easy chapter navigation, continue to the next chapter, or explore the complete Book of 2 ಕೊರಿಂಥದವರಿಗೆ and the Holy Bible online.
Choose a Chapter
2 ಕೊರಿಂಥದವರಿಗೆ 8
ಅಧ್ಯಾಯ 8
1. ಇದಲ್ಲದೆ ಸಹೋದರರೇ, ಮಕೆದೋನ್ಯದ ಸಭೆಗಳಿಗೆ ಅನುಗ್ರಹಿಸಲ್ಪಟ್ಟ ದೇವರ ಕೃಪೆಯನ್ನು ನಿಮಗೆ ತಿಳಿಸುತ್ತೇನೆ.
2. ಆ ಸಭೆಗಳವರು ಬಹಳ ಹಿಂಸೆಯನ್ನು ತಾಳುವವರಾದರೂ ವಿಪರೀತ ವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.
3. ಅವರು ಶಕ್ತ್ಯಾನುಸಾರವಾಗಿ ಮಾತ್ರ ಕೊಡಲಿಲ್ಲ; ಹೌದು, ಶಕ್ತಿಯನ್ನು ವಿಾರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು; ಇದಕ್ಕೆ ನಾನು ಸಾಕ್ಷಿ.
4. ಪರಿಶುದ್ಧರಿಗೆ ದಾನ ಕೊಡುವ ಅನ್ಯೋನ್ಯತೆಯಲ್ಲಿ ತಾವು ಪಾಲುಗಾರ ರಾಗುವಂತೆ ನಮ್ಮನ್ನು ಬಹಳವಾಗಿ ಬೇಡಿಕೊಂಡರು.
5. ನಾವು ನಿರೀಕ್ಷಿಸಿದ ಪ್ರಕಾರವಾಗಿ ಅವರು ಕೊಡದೆ ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿಕೊಟ್ಟರು.
6. ಹೀಗಿರಲಾಗಿ ಈ ಕೃಪಾಕಾರ್ಯವನ್ನು ಪ್ರಾರಂಭಿಸಿದ ತೀತನು ನಿಮ್ಮಲ್ಲಿ ಸಹ ಅದನ್ನು ಕೊನೆಗಾಣಿಸಬೇಕೆಂದು ನಾವು ಅವನನ್ನು ಬೇಡಿಕೊಂಡೆವು.
7. ಆದದರಿಂದ ನೀವು ಎಲ್ಲವುಗಳಲ್ಲಿ ಅಂದರೆ ನಂಬಿಕೆಯಲ್ಲಿಯೂ ಮಾತಿ ನಲ್ಲಿಯೂ ಜ್ಞಾನದಲ್ಲಿಯೂ ಎಲ್ಲಾ ಆಸಕ್ತಿಯಲ್ಲಿಯೂ ನಮ್ಮ ಕಡೆಗಿರುವ ನಿಮ್ಮ ಪ್ರೀತಿಯಲ್ಲಿಯೂ ಸಮೃದ್ಧರಾಗಿರುವಂತೆಯೇ ಈ ಕೃಪೆಯಲ್ಲಿಯೂ ಸಮೃದ್ಧರಾಗಿರ್ರಿ.
8. ನಾನು ಇದನ್ನು ಆಜ್ಞೆಯಂತೆ ಹೇಳದೆ ಇತರರ ಆಸಕ್ತಿಯನ್ನು ತೋರಿಸಿಕೊಟ್ಟು ನಿಮ್ಮ ಪ್ರೀತಿಯು ಯಥಾರ್ಥವಾದದ್ದೆಂಬದನ್ನು ಸಿದ್ಧಾಂತಪಡಿಸುವದ ಕ್ಕಾಗಿಯೇ ಹೇಳುತ್ತೇನೆ.
9. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯನ್ನು ನೀವು ಅರಿತವರಾಗಿದ್ದೀರಿ; ಹೇಗಂದರೆ ಆತನು ಐಶ್ವರ್ಯವಂತನಾಗಿದ್ದರೂ ಆತನ ಬಡತನದ ಮೂಲಕ ನೀವು ಐಶ್ವರ್ಯವಂತ ರಾಗುವಂತೆ ಆತನು ನಿಮಗೋಸ್ಕರ ಬಡವನಾದನು.
10. ಈ ಕಾರ್ಯವನ್ನು ಕುರಿತು ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ; ಇದನ್ನು ಒಂದು ವರುಷದ ಹಿಂದೆ ನಡಿಸುವದಕ್ಕೆ ತೊಡಗುವದರಲ್ಲಿಯೂ ಅದನ್ನು ನಡಿಸಬೇಕೆಂದು ಮಾಡುವದರಲ್ಲಿಯೂ ನೀವು ಮುಂದಾಗಿದ್ದದರಿಂದ ಅದು ನಿಮಗೆ ವಿಹಿತವಾಗಿದೆ.
11. ಈ ಕಾರ್ಯವನ್ನು ಮಾಡುವದಕ್ಕೆ ಹೇಗೆ ನಿಮ್ಮಲ್ಲಿ ಸಿದ್ದಮನಸ್ಸು ಇತ್ತೋ ಹಾಗೆಯೇ ನೆರವೇರಿಸಿರಿ; ಹೀಗೆ ನಿಮಗಿರುವದರೊಳಗಿಂದ ಆ ಕಾರ್ಯವನ್ನು ಪೂರ್ತಿ ಮಾಡಿರಿ.
12. ಒಬ್ಬನು ಕೊಡುವದಕ್ಕೆ ಮನಸ್ಸಿದ್ದರೆ ಅವನು ತನಗೆ ಇಲ್ಲದ್ದಕ್ಕನುಸಾರವಾಗಿ ಅಲ್ಲ, ಆದರೆ ಇರುವದಕ್ಕನುಸಾರವಾಗಿಯೇ ಕೊಟ್ಟರೆ ಅದು ಸಮರ್ಪ ಕವಾಗಿರುವದು.
13. ಇತರರ ಭಾರವು ಪರಿಹಾರವಾಗ ಬೇಕೆಂದೂ ನಿಮಗೆ ಭಾರವಾಗಬೇಕೆಂದೂ ನನ್ನ ತಾತ್ಪರ್ಯವಲ್ಲ.
14. ಸಮಾನತ್ವವಿರಬೇಕೆಂದೇ ನನ್ನ ತಾತ್ಪರ್ಯ. ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆ ಯನ್ನು ನೀಗಿಸುತ್ತದೆ; ಮುಂದೆ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವದು; ಹೀಗೆ ಸಮಾನತ್ವವುಂಟಾಗುವದು.
15. ಬಹಳ ಕೂಡಿಸಿದವನಿಗೆ ಏನೂ ಹೆಚ್ಚಾಗಲಿಲ್ಲ; ಸ್ವಲ್ಪವಾಗಿ ಕೂಡಿಸಿದವನಿಗೆ ಏನೂ ಕಡಿಮೆಯಾಗಲಿಲ್ಲ ಎಂದು ಬರೆದಿರುವ ಪ್ರಕಾರವಾಗುವದು.
16. ಆದರೆ ನಿಮ್ಮ ವಿಷಯವಾಗಿ ಅದೇ ಹಿತಚಿಂತನೆ ಯನ್ನು ದೇವರು ತೀತನ ಹೃದಯದಲ್ಲಿ ಹುಟ್ಟಿಸಿದ್ದಕ್ಕಾಗಿ ದೇವರಿಗೆ ಸ್ತೋತ್ರವಾಗಲಿ.
17. ಅವನು ನಿಮ್ಮ ಬಳಿಗೆ ಹೋಗಬೇಕೆಂದು ನಾವು ಕೇಳಿಕೊಂಡಾಗ ನಿಜ ವಾಗಿಯೂ ಒಪ್ಪಿದ್ದಲ್ಲದೆ ಅತ್ಯಾಸಕ್ತನಾಗಿದ್ದು ತನ್ನಷ್ಟಕ್ಕೆ ತಾನೇ ನಿಮ್ಮ ಬಳಿಗೆ ಬಂದಿದ್ದಾನೆ.
18. ಇದಲ್ಲದೆ ಸುವಾರ್ತೆಯ ವಿಷಯದಲ್ಲಿ ಎಲ್ಲಾ ಸಭೆಗಳಲ್ಲಿಯೂ ಹೆಸರುಗೊಂಡಿದ್ದ ಸಹೋದರನನ್ನು ಅವನ ಜೊತೆ ಯಲ್ಲಿ ಕಳುಹಿಸಿದ್ದೇವೆ.
19. ಮಾತ್ರವಲ್ಲದೆ ಈ ಕೃಪಾ ಕಾರ್ಯವು ನಮ್ಮ ಮೂಲಕ ಕರ್ತನ ಮಹಿಮೆಗಾಗಿ ನಡೆಯುವಂತೆ ನಿಮ್ಮ ಸಿದ್ಧಮನಸ್ಸನ್ನು ಪ್ರಕಟಿಸುವದಕ್ಕಾಗಿ ನಮ್ಮ ಜೊತೆಯಲ್ಲಿ ಪ್ರಯಾಣ ಮಾಡುವದಕ್ಕೆ ಇವನು ಸಹ ಸಭೆಗಳಿಂದ ಆರಿಸಲ್ಪಟ್ಟಿದ್ದಾನೆ.
20. ನಾವು ಪಾರುಪತ್ಯ ಮಾಡುವ ಈ ಸಮೃದ್ಧಿಯ ವಿಷಯದಲ್ಲಿ ಒಬ್ಬರೂ ನಮ್ಮ ಮೇಲೆ ತಪ್ಪುಹೊರಿಸುವದಕ್ಕೆ ಆಸ್ಪದ ವಿರಬಾರದು.
21. ಯಾಕಂದರೆ ಕರ್ತನ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಗೌರವ ವಾದವುಗಳನ್ನು ಯೋಚನೆಗೆ ತಂದುಕೊಳ್ಳುವವರಾ ಗಿದ್ದೇವೆ.
22. ಅವರ ಸಂಗಡ ನಮ್ಮ ಸಹೋದರನನ್ನು ಕಳುಹಿಸಿದ್ದೇವೆ;ನಾವು ಅನೇಕ ಸಮಯಗಳಲ್ಲಿಯೂ ಅನೇಕ ಕಾರ್ಯಗಳಲ್ಲಿಯೂ ಅವನನ್ನು ಪರೀಕ್ಷಿಸಿ ಆಸಕ್ತಿಯುಳ್ಳವನೆಂದು ತಿಳುಕೊಂಡಿದ್ದೇವೆ; ಈಗಲಾ ದರೋ ಅವನು ನಿಮ್ಮಲ್ಲಿಟ್ಟಿರುವ ವಿಶೇಷ ಭರವಸದಿಂದ ಇನ್ನೂ ಬಹು ಹೆಚ್ಚಾಗಿ ಆಸಕ್ತಿಯುಳ್ಳವನಾಗಿದ್ದಾನೆ.
23. ತೀತನನ್ನು ಕುರಿತು ಕೇಳುತ್ತೀರೋ, ಅವನು ನನ್ನ ಪಾಲುಗಾರನೂ ನಿಮ್ಮ ವಿಷಯವಾಗಿ ನನಗೆ ಜೊತೆ ಸಹಕಾರಿಯೂ ಆಗಿದ್ದಾನೆ; ನಮ್ಮ ಸಹೋದರರನ್ನು ಕುರಿತು ಕೇಳುತ್ತೀರೋ, ಅವರು ಸಭೆಗಳ ಸೇವಕರೂ ಕ್ರಿಸ್ತನಮಹಿಮೆಯೂ ಆಗಿದ್ದಾರೆ.
24. ಆದಕಾರಣ ನಿಮ್ಮ ಪ್ರೀತಿಯನ್ನೂ ನಿಮ್ಮ ವಿಷಯವಾಗಿರುವ ನಮ್ಮ ಹೊಗಳಿ ಕೆಯನ್ನೂ ಇವರಿಗೂ ಸಭೆಗಳಿಗೂ ವ್ಯಕ್ತಪಡಿಸಿರಿ.
About 2 ಕೊರಿಂಥದವರಿಗೆ Chapter 8
Read 2 ಕೊರಿಂಥದವರಿಗೆ Chapter 8 online from the Holy Bible. This chapter is part of the Book of 2 ಕೊರಿಂಥದವರಿಗೆ in the New Testament. Continue reading with the chapter navigation above or explore the complete book.
Book Information
Book: 2 ಕೊರಿಂಥದವರಿಗೆ
Chapter: 8
Testament: New Testament
How to Read this Chapter
Use the Previous and Next Chapter buttons to continue reading 2 ಕೊರಿಂಥದವರಿಗೆ. You can also adjust the font size for comfortable reading and browse other books of the Bible using the navigation links.
More Resources
- 📱 Hindi Android Bible App
- 📱 Hindi Christian Songs from waytochurch
- 📖 Read on Malayalam Christian Songs – madely
Continue Reading the Bible
Continue reading 2 ಕೊರಿಂಥದವರಿಗೆ Chapter 8 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is 2 ಕೊರಿಂಥದವರಿಗೆ Chapter 8?
2 ಕೊರಿಂಥದವರಿಗೆ Chapter 8 is part of the Book of 2 ಕೊರಿಂಥದವರಿಗೆ in the Holy Bible.
Can I read this chapter online?
Yes. You can read the complete 2 ಕೊರಿಂಥದವರಿಗೆ Chapter 8 online for free with easy chapter navigation.
More Chapters from 2 ಕೊರಿಂಥದವರಿಗೆ
- 2 ಕೊರಿಂಥದವರಿಗೆ Chapter 12
- 2 ಕೊರಿಂಥದವರಿಗೆ Chapter 9
- 2 ಕೊರಿಂಥದವರಿಗೆ Chapter 10
- 2 ಕೊರಿಂಥದವರಿಗೆ Chapter 5
- 2 ಕೊರಿಂಥದವರಿಗೆ Chapter 1
- 2 ಕೊರಿಂಥದವರಿಗೆ Chapter 7
- 2 ಕೊರಿಂಥದವರಿಗೆ Chapter 2
Explore More from ಹೊಸ ಒಡಂಬಡಿಕೆ
- 1 ತಿಮೊಥೆಯನಿಗೆ Chapter 6
- ಗಲಾತ್ಯದವರಿಗೆ Chapter 6
- ಮತ್ತಾಯನು Chapter 2
- ಮತ್ತಾಯನು Chapter 26
- ಇಬ್ರಿಯರಿಗೆ Chapter 1
- ರೋಮಾಪುರದವರಿಗೆ Chapter 15
- ಮಾರ್ಕನು Chapter 14