Read ಮತ್ತಾಯನು Chapter 11 Online
Read ಮತ್ತಾಯನು Chapter 11 online from the Holy Bible. This chapter is part of the Book of ಮತ್ತಾಯನು in the New Testament. Browse every verse with easy chapter navigation, continue to the next chapter, or explore the complete Book of ಮತ್ತಾಯನು and the Holy Bible online.
Choose a Chapter
ಮತ್ತಾಯನು 11
ಅಧ್ಯಾಯ 11
1. ಮತ್ತು ಆದದ್ದೇನಂದರೆ, ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಅಪ್ಪಣೆ ಕೊಡು ವದನ್ನು ಮುಗಿಸಿದ ಮೇಲೆ ಅವರ ಪಟ್ಟಣಗಳಲ್ಲಿ ಬೋಧಿಸುವದಕ್ಕೂ ಸಾರುವದಕ್ಕೂ ಅಲ್ಲಿಂದ ಹೊರಟು ಹೋದನು.
2. ಆಗ ಯೋಹಾನನು ಸೆರೆಮನೆಯಲ್ಲಿ ಕ್ರಿಸ್ತನ ಕಾರ್ಯಗಳನ್ನು ಕೇಳಿದ್ದರಿಂದ ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಆತನಿಗೆ–
3. ಬರಬೇಕಾದಾತನು ನೀನೋ ಇಲ್ಲವೆ ನಾವು ಬೇರೊಬ್ಬನಿಗಾಗಿ ನೋಡಬೇಕೋ ಅಂದನು.
4. ಯೇಸು ಪ್ರತ್ಯುತ್ತರವಾಗಿ ಅವರಿಗೆ– ನೀವು ಹೋಗಿ ಕೇಳುವವುಗಳನ್ನೂ ನೋಡುವವು ಗಳನ್ನೂ ಯೋಹಾನನಿಗೆ ತಿಳಿಸಿರಿ;
5. ಕುರುಡರು ದೃಷ್ಟಿ ಹೊಂದುತ್ತಾರೆ, ಕುಂಟರು ನಡೆಯುತ್ತಾರೆ,ಕುಷ್ಟರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಎಬ್ಬಿಸಲ್ಪಡುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ.
6. ನನ್ನ ವಿಷಯವಾಗಿ ಸಂಶಯಪಡದವನೇ ಧನ್ಯನು ಅಂದನು.
7. ಅವರು ಹೊರಟುಹೋಗುತ್ತಿದ್ದಾಗ ಯೇಸು ಯೋಹಾನನ ಕುರಿತಾಗಿ ಜನಸಮೂಹಗಳೊಂ ದಿಗೆ — ಏನು ನೋಡುವದಕ್ಕಾಗಿ ನೀವು ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವದಂಟನ್ನೋ?
8. ಆದರೆ ನೀವು ಏನು ನೊಡುವದಕ್ಕಾಗಿ ಹೋದಿರಿ? ನಯವಾದ ವಸ್ತ್ರಗಳನ್ನು ಧರಿಸಿಕೊಂಡ ಮನುಷ್ಯ ನನ್ನೋ? ಇಗೋ, ನಯವಾದ ಬಟ್ಟೆಗಳನ್ನು ಧರಿಸಿಕೊ ಳ್ಳುವವರು ಅರಮನೆಗಳಲ್ಲಿ ಇರುತ್ತಾರೆ.
9. ಆದರೆ ನೀವು ಏನು ನೋಡುವದಕ್ಕಾಗಿ ಹೋದಿರಿ? ಪ್ರವಾದಿ ಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ.
10. ಯಾಕಂ ದರೆ–ಇಗೋ, ನಿನ್ನ ಮಾರ್ಗವನ್ನು ನಿನ್ನ ಮುಂದೆ ಸಿದ್ಧಪಡಿಸುವ ನನ್ನ ದೂತನನ್ನು ನಾನು ನಿನ್ನ ಮುಂದೆ ಕಳುಹಿಸುತ್ತೇನೆಂದು ಯಾವನ ವಿಷಯವಾಗಿ ಬರೆದಿ ದೆಯೋ ಅವನೇ ಇವನು.
11. ನಾನು ನಿಮಗೆ ನಿಜವಾಗಿ ಹೇಳುತ್ತೇನೆ–ಸ್ತ್ರೀಯರಲ್ಲಿ ಹುಟ್ಟಿದವರೊ ಳಗೆ ಬಾಪ್ತಿಸ್ಮ ಮಾಡಿಸುವ ಯೋಹಾನನಿಗಿಂತ ದೊಡ್ಡವನು ಏಳಲಿಲ್ಲ; ಆದಾಗ್ಯೂ ಪರಲೋಕ ರಾಜ್ಯದಲ್ಲಿ ಅತ್ಯಲ್ಪನಾದವನು ಅವನಿಗಿಂತಲೂ ದೊಡ್ಡ ವನಾಗಿದ್ದಾನೆ.
12. ಇದಲ್ಲದೆ ಬಾಪ್ತಿಸ್ಮ ಮಾಡಿಸುವ ಯೋಹಾನನ ದಿನಗಳಿಂದ ಇದುವರೆಗೆ ಪರಲೋಕ ರಾಜ್ಯವು ಬಲಾತ್ಕಾರಕ್ಕೆ ಗುರಿಯಾಗಿದೆ; ಮತ್ತು ಬಲಾತ್ಕಾರಿಗಳು ಅದನ್ನು ಒತ್ತಾಯದಿಂದ ತೆಗೆದು ಕೊಳ್ಳುತ್ತಾರೆ.
13. ಯಾಕಂದರೆ ಎಲ್ಲಾ ಪ್ರವಾದಿಗಳೂ ನ್ಯಾಯಪ್ರಮಾಣವೂ ಯೋಹಾನನ ವರೆಗೆ ಪ್ರವಾದಿ ಸಿದ್ದುಂಟು.
14. ನೀವು ಇದನ್ನು ಅಂಗೀಕರಿಸುವದಕ್ಕೆ ಮನಸ್ಸಿದ್ದರೆ ಬರಬೇಕಾಗಿದ್ದ ಎಲೀಯನು ಇವನೇ.
15. ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ.
16. ಆದರೆ ಈ ಸಂತತಿಯನ್ನು ನಾನು ಯಾವದಕ್ಕೆ ಹೋಲಿಸಲಿ? ಮಕ್ಕಳು ಪೇಟೆಗಳಲ್ಲಿ ಕೂತುಕೊಂಡು ತಮ್ಮ ಸಂಗಡಿ ಗರನ್ನು ಕರೆಯುತ್ತಾ–
17. ನಾವು ನಿಮಗೋಸ್ಕರ ಕೊಳಲೂದಿದೆವು, ಆದರೆ ನೀವು ಕುಣಿಯಲಿಲ್ಲ; ನಾವು ನಿಮಗೋಸ್ಕರ ಶೋಕಿಸಿದೆವು, ಆದರೆ ನೀವು ಗೋಳಾಡಲಿಲ್ಲ ಎಂದು ಹೇಳುವವರಿಗೆ ಇದು ಹೋಲಿಕೆಯಾಗಿದೆ.
18. ಯಾಕಂದರೆ ಯೋಹಾನನು ತಿನ್ನದೆಯೂ ಕುಡಿಯದೆಯೂ ಬಂದನು. ಅದಕ್ಕೆ ಅವರು–ಅವನಿಗೆ ದೆವ್ವ ಹಿಡಿದಿದೆ ಅನ್ನುತ್ತಾರೆ.
19. ಮನುಷ್ಯಕುಮಾರನು ತಿನ್ನುವವನಾಗಿಯೂ ಕುಡಿಯುವವನಾಗಿಯೂ ಬಂದನು. ಅದಕ್ಕೆ ಅವರು–ಇಗೋ, ಈ ಮನುಷ್ಯನು ಹೊಟ್ಟೆ ಬಾಕನೂ ಮದ್ಯಪಾನ ಮಾಡುವವನೂ ಸುಂಕದವರ ಪಾಪಿಗಳ ಸ್ನೇಹಿತನೂ ಎಂದು ಅನ್ನುತ್ತಾರೆ. ಆದರೆ ಜ್ಞಾನವು ನೀತಿಯುಳ್ಳದ್ದೆಂದು ತನ್ನ ಮಕ್ಕಳಿಂದ ನಿರ್ಣಯಿ ಸಲ
20. ತರುವಾಯ ತಾನು ಹೆಚ್ಚಾದ ಮಹತ್ಕಾರ್ಯ ಗಳನ್ನು ನಡಿಸಿದ ಪಟ್ಟಣಗಳು ಮಾನಸಾಂತರಪಡದೆ ಇದ್ದದರಿಂದ ಆತನು ಅವುಗಳನ್ನು ಗದರಿಸತೊ ಡಗಿ —
21. ಖೊರಾಜಿನೇ, ನಿನಗೆ ಅಯ್ಯೋ! ಬೆತ್ಸಾಯಿದವೇ, ನಿನಗೆ ಅಯ್ಯೋ! ಯಾಕಂದರೆ ನಿನ್ನೊಳಗೆ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್‌ಗಳಲ್ಲಿ ನಡೆಯುತ್ತಿದ್ದರೆ ಅವುಗಳು ಆಗಲೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರಪಡುತ್ತಿದ್ದವು.
22. ಆದರೆ ನಾನು ನಿಮಗೆ ಹೇಳುವದೇನಂದರೆ– ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ತೂರ್ ಮತ್ತು ಸೀದೋನ್‌ಗಳ ಗತಿಯು ಹೆಚ್ಚು ತಾಳಬಹುದಾಗಿರುವದು.
23. ಆಕಾಶದವರೆಗೂ ಹೆಚ್ಚಿಸಲ್ಪಟ್ಟ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬಲ್ಪಡುವಿ; ಯಾಕಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಈ ದಿನದವರೆಗೂ ಇರುತ್ತಿತ್ತು.
24. ಆದರೆ ನಾನು ನಿನಗೆ ಹೇಳುವದೇನಂದರೆ –ನ್ಯಾಯತೀರ್ಪಿನ ದಿನದಲ್ಲಿ ನಿನಗಿಂತಲೂ ಸೊದೋಮಿನ ಗತಿಯು ಹೆಚ್ಚು ತಾಳಬಹುದಾಗಿರುವದು.
25. ಆ ಸಮಯದಲ್ಲಿ ಯೇಸು–ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಬುದ್ಧಿವಂತ ರಿಗೂ ಮರೆಮಾಡಿ ಶಿಶುಗಳಿಗೆ ಪ್ರಕಟಮಾಡಿ ರುವದಕ್ಕಾಗಿ ನಾನು ನಿನ್ನನ್ನು ಕೊಂಡಾಡುತ್ತೇನೆ.
26. ಹೌದು, ತಂದೆಯೇ, ಇದು ನಿನ್ನ ದೃಷ್ಟಿಯಲ್ಲಿ ಒಳ್ಳೆಯದಾಗಿ ತೋಚಿತು.
27. ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ತಂದೆಯೇ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ; ಇಲ್ಲವೆ ಮಗನೇ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದ
28. ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.
29. ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.
30. ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು.
About ಮತ್ತಾಯನು Chapter 11
Read ಮತ್ತಾಯನು Chapter 11 online from the Holy Bible. This chapter is part of the Book of ಮತ್ತಾಯನು in the New Testament. Continue reading with the chapter navigation above or explore the complete book.
Book Information
Book: ಮತ್ತಾಯನು
Chapter: 11
Testament: New Testament
How to Read this Chapter
Use the Previous and Next Chapter buttons to continue reading ಮತ್ತಾಯನು. You can also adjust the font size for comfortable reading and browse other books of the Bible using the navigation links.
More Resources
Continue Reading the Bible
Continue reading ಮತ್ತಾಯನು Chapter 11 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is ಮತ್ತಾಯನು Chapter 11?
ಮತ್ತಾಯನು Chapter 11 is part of the Book of ಮತ್ತಾಯನು in the Holy Bible.
Can I read this chapter online?
Yes. You can read the complete ಮತ್ತಾಯನು Chapter 11 online for free with easy chapter navigation.
More Chapters from ಮತ್ತಾಯನು
- ಮತ್ತಾಯನು Chapter 6
- ಮತ್ತಾಯನು Chapter 4
- ಮತ್ತಾಯನು Chapter 28
- ಮತ್ತಾಯನು Chapter 22
- ಮತ್ತಾಯನು Chapter 20
- ಮತ್ತಾಯನು Chapter 15
- ಮತ್ತಾಯನು Chapter 14
Explore More from ಹೊಸ ಒಡಂಬಡಿಕೆ
- ಪ್ರಕಟನೆ Chapter 5
- ಮತ್ತಾಯನು Chapter 12
- ಮಾರ್ಕನು Chapter 12
- ಪ್ರಕಟನೆ Chapter 6
- ರೋಮಾಪುರದವರಿಗೆ Chapter 4
- ಇಬ್ರಿಯರಿಗೆ Chapter 6
- ಮಾರ್ಕನು Chapter 6