Read ಮತ್ತಾಯನು Chapter 4 Online
Read ಮತ್ತಾಯನು Chapter 4 online from the Holy Bible. This chapter is part of the Book of ಮತ್ತಾಯನು in the New Testament. Browse every verse with easy chapter navigation, continue to the next chapter, or explore the complete Book of ಮತ್ತಾಯನು and the Holy Bible online.
Choose a Chapter
ಮತ್ತಾಯನು 4
ಅಧ್ಯಾಯ 4
1. ಆಗ ಯೇಸು ಸೈತಾನನಿಂದ ಶೋಧಿಸಲ್ಪಡು ವದಕ್ಕಾಗಿ ಆತ್ಮನಿಂದ ಅಡವಿಗೆ ನಡಿಸಲ್ಪಟ್ಟನು.
2. ಆತನು ನಾಲ್ವತ್ತು ದಿವಸ ಹಗಲಿರುಳು ಉಪವಾಸವಿದ್ದ ತರುವಾಯ ಹಸಿದನು.
3. ಆಗ ಆ ಶೋಧಕನು ಆತನ ಬಳಿಗೆ ಬಂದು–ನೀನು ದೇವಕುಮಾರನಾಗಿದ್ದರೆ ಈ ಕಲ್ಲುಗಳು ರೊಟ್ಟಿಯಾಗುವಂತೆ ಅಪ್ಪಣೆಕೊಡು ಅಂದನು.
4. ಆದರೆ ಆತನು ಪ್ರತ್ಯುತ್ತರವಾಗಿ–ಮನುಷ್ಯನು ರೊಟ್ಟಿ ಮಾತ್ರದಿಂದಲೇ ಜೀವಿಸುವದಿಲ್ಲ, ಆದರೆ ದೇವರ ಬಾಯೊಳಗಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಜೀವಿಸುವನು ಎಂದು ಬರೆದದೆ ಅಂದನು.
5. ತರುವಾಯ ಸೈತಾನನು ಆತನನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡುಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ–
6. ನೀನು ದೇವ ಕುಮಾರನಾಗಿದ್ದರೆ ನೀನಾಗಿಯೇ ಕೆಳಗೆ ದುಮುಕು; ಯಾಕಂದರೆ–ಯಾವ ಸಮಯದಲ್ಲಿಯಾದರೂ ನಿನ್ನ ಕಾಲು ಕಲ್ಲಿಗೆ ಅಪ್ಪಳಿಸದಂತೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಅಪ್ಪಣೆ ಕೊಡುವನು; ಮತ್ತು ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು ಎಂದು ಬರೆದದೆ ಅಂದ
7. ಯೇಸು ಅವನಿಗೆ — ನೀನು ನಿನ್ನ ದೇವರಾದ ಕರ್ತನನ್ನು ಶೋಧಿಸಬಾರದೆಂದು ಬರೆದದೆ ಎಂದು ಹೇಳಿದನು.
8. ಮತ್ತೊಮ್ಮೆ ಸೈತಾನನು ಆತನನ್ನು ಅತ್ಯುನ್ನತವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ–
9. ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಾನು ನಿನಗೆ ಕೊಡುವೆನು ಅಂದನು.
10. ಆಗ ಯೇಸು ಅವನಿಗೆ–ಸೈತಾನನೇ, ಇಲ್ಲಿಂದ ತೊಲಗಿಹೋಗು; ಯಾಕಂದರೆ–ನೀನು ನಿನ್ನ ದೇವ ರಾದ ಕರ್ತನನ್ನು ಮಾತ್ರ ಆರಾಧಿಸಿ ಆತನೊಬ್ಬನನ್ನೇ ಸೇವಿಸಬೇಕು ಎಂಬದಾಗಿ ಬರೆದದೆ ಅಂದನು.
11. ಆಗ ಸೈತಾನನು ಆತನನ್ನು ಬಿಟ್ಟನು; ಮತ್ತು ಇಗೋ, ದೇವದೂತರು ಬಂದು ಆತನನ್ನು ಉಪಚರಿಸಿದರು.
12. ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟಿದ್ದಾನೆಂದು ಯೇಸು ಕೇಳಿ ಗಲಿಲಾಯಕ್ಕೆ ಹೊರಟುಹೋದನು.
13. ಮತ್ತು ಆತನು ನಜರೇತನ್ನು ಬಿಟ್ಟು ಜೆಬುಲೋನ್, ನೆಫ್ತಲೀಮ್ ಮೇರೆಗಳ ಸಮುದ್ರತೀರದಲ್ಲಿರುವ ಕಪೆರ್ನೌಮಿಗೆ ಬಂದು ಅಲ್ಲಿ ವಾಸಿಸಿದನು.
14. ಹೀಗೆ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಇದಾಯಿತು; ಅದೇನಂದರೆ–
15. ಯೊರ್ದನಿನ ಆಚೆ ಸಮುದ್ರದ ಮಾರ್ಗದಲ್ಲಿರುವ ಜೆಬುಲೋನ್ ಪ್ರಾಂತ್ಯದಲ್ಲಿಯೂ ನೆಫ್ತಲೀಮ್ ಪ್ರಾಂತ್ಯ ಮತ್ತು ಅನ್ಯಜನರ ಗಲಿಲಾಯದಲ್ಲಿಯೂ
16. ಕತ್ತಲೆಯಲ್ಲಿ ಕೂತಿದ್ದ ಜನರು ದೊಡ್ಡ ಬೆಳಕನ್ನು ಕಂಡರು; ಮತ್ತು ಮರಣದ ನೆರಳಿನಲ್ಲಿ ಕೂತಿದ್ದ ಆ ಪ್ರಾಂತ್ಯದವರಿಗೆ ಬೆಳಕು ಉದಯವಾಯಿತು ಎಂಬದೇ.
17. ಅಂದಿನಿಂದ ಯೇಸು–ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪಿಸಿತು ಎಂದು ಸಾರಿ ಹೇಳುವದಕ್ಕೆ ಪ್ರಾರಂಭಿಸಿದನು.
18. ಮತ್ತು ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದುಹೋಗುತ್ತಿದ್ದಾಗ ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರು ಸಮುದ್ರ ದಲ್ಲಿ ಬಲೆ ಬೀಸುವದನ್ನು ಕಂಡನು; ಯಾಕಂದರೆ ಅವರು ಬೆಸ್ತರಾಗಿದ್ದರು.
19. ಆಗ ಆತನು ಅವರಿಗೆ– ನನ್ನನ್ನು ಹಿಂಬಾಲಿಸಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಾನು ನಿಮ್ಮನ್ನು ಮಾಡುವೆನು ಅಂದನು.
20. ಅವರು ತಕ್ಷಣವೇ ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
21. ಆತನು ಅಲ್ಲಿಂದ ಮುಂದೆ ಹೋಗಿ ಜೆಬೆದಾಯನ ಮಗನಾದ ಯಾಕೋಬ ಅವನ ಸಹೋದರನಾದ ಯೋಹಾನ ಎಂಬ ಬೇರೆ ಇಬ್ಬರು ಸಹೋದರರು ತಮ್ಮ ತಂದೆಯಾದ ಜೆಬೆದಾಯನ ಕೂಡ ದೋಣಿ ಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದದ್ದನ್ನು ಕಂಡು ಅವರನ್ನು ಕರೆದನು.
22. ಅವರು ತಕ್ಷಣವೇ ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಆತನನ್ನು ಹಿಂಬಾಲಿಸಿದರು.
23. ಬಳಿಕ ಯೇಸು ಗಲಿಲಾಯವನ್ನೆಲ್ಲಾ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುವಾತನಾಗಿ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರಲ್ಲಿದ್ದ ಎಲ್ಲಾ ತರದ ರೋಗಗಳನ್ನು ಸಕಲ ವಿಧವಾದ ಜಾಡ್ಯಗಳನ್ನೂ ಗುಣಮಾಡುತ್ತಾ ಇದ್ದನು.
24. ಆತನ ಕೀರ್ತಿಯು ಸಿರಿಯದಲ್ಲೆಲ್ಲಾ ಹರಡಿತು; ಆಗ ನಾನಾ ವಿಧವಾದ ರೋಗಗಳಿಂದ ಮತ್ತು ಯಾತನೆಗಳಿಂದ ಅಸ್ವಸ್ಥರಾದವರೆಲ್ಲರನ್ನೂ ದೆವ್ವಗಳು ಹಿಡಿದವರನ್ನೂ ಮೂರ್ಛಾ ರೋಗಿಗಳನ್ನೂ ಪಾರ್ಶ್ವವಾಯುರೋಗಿ ಗಳನ್ನೂ ಆತನ ಬಳಿಗೆ ತಂದರು. ಆತನು ಅವರನ್ನು ಸ್ವಸ್ಥಪಡಿಸಿದನು.
25. ಆಗ ಗಲಿಲಾಯದಿಂದಲೂ ದೆಕಪೊಲಿಯದಿಂದಲೂ ಯೆರೂಸಲೇಮಿನಿಂದಲೂ ಯೂದಾಯದಿಂದಲೂ ಯೊರ್ದನಿನ ಆಚೆಯಿಂದ ಲೂ ಜನರು ದೊಡ್ಡ ಸಮೂಹಗಳಾಗಿ ಆತನನ್ನು ಹಿಂಬಾಲಿಸಿದರು.
About ಮತ್ತಾಯನು Chapter 4
Read ಮತ್ತಾಯನು Chapter 4 online from the Holy Bible. This chapter is part of the Book of ಮತ್ತಾಯನು in the New Testament. Continue reading with the chapter navigation above or explore the complete book.
Book Information
Book: ಮತ್ತಾಯನು
Chapter: 4
Testament: New Testament
How to Read this Chapter
Use the Previous and Next Chapter buttons to continue reading ಮತ್ತಾಯನು. You can also adjust the font size for comfortable reading and browse other books of the Bible using the navigation links.
More Resources
Continue Reading the Bible
Continue reading ಮತ್ತಾಯನು Chapter 4 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is ಮತ್ತಾಯನು Chapter 4?
ಮತ್ತಾಯನು Chapter 4 is part of the Book of ಮತ್ತಾಯನು in the Holy Bible.
Can I read this chapter online?
Yes. You can read the complete ಮತ್ತಾಯನು Chapter 4 online for free with easy chapter navigation.
More Chapters from ಮತ್ತಾಯನು
- ಮತ್ತಾಯನು Chapter 6
- ಮತ್ತಾಯನು Chapter 15
- ಮತ್ತಾಯನು Chapter 28
- ಮತ್ತಾಯನು Chapter 22
- ಮತ್ತಾಯನು Chapter 20
- ಮತ್ತಾಯನು Chapter 14
- ಮತ್ತಾಯನು Chapter 11
Explore More from ಹೊಸ ಒಡಂಬಡಿಕೆ
- ಪ್ರಕಟನೆ Chapter 21
- ಇಬ್ರಿಯರಿಗೆ Chapter 2
- ಯೋಹಾನನು Chapter 19
- ಮತ್ತಾಯನು Chapter 5
- ಅಪೊಸ್ತಲರ ಕೃತ್ಯಗಳು Chapter 18
- ಅಪೊಸ್ತಲರ ಕೃತ್ಯಗಳು Chapter 27
- ಮತ್ತಾಯನು Chapter 24