Read ಪ್ರಕಟನೆ Chapter 10 Online
Read ಪ್ರಕಟನೆ Chapter 10 online from the Holy Bible. This chapter is part of the Book of ಪ್ರಕಟನೆ in the New Testament. Browse every verse with easy chapter navigation, continue to the next chapter, or explore the complete Book of ಪ್ರಕಟನೆ and the Holy Bible online.
Choose a Chapter
ಪ್ರಕಟನೆ 10
ಅಧ್ಯಾಯ 10
1. ಮೇಘವನ್ನು ಧರಿಸಿಕೊಂಡಿದ್ದ ಬಲಿಷ್ಠ ನಾದ ಮತ್ತೊಬ್ಬ ದೂತನು ಪರಲೋಕ ದಿಂದ ಇಳಿದು ಬರುವದನ್ನು ನಾನು ಕಂಡೆನು. ಅವನ ತಲೆಯ ಮೇಲೆ ಮಳೆ ಬಿಲ್ಲು ಇತ್ತು; ಅವನ ಮುಖವು ಸೂರ್ಯನಂತಿತ್ತು; ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು;
2. ತೆರೆದಿದ್ದ ಒಂದು ಚಿಕ್ಕ ಪುಸ್ತಕವು ಅವನ ಕೈಯಲ್ಲಿ ಇತ್ತು; ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟು
3. ಸಿಂಹವು ಗರ್ಜಿಸುವ ಪ್ರಕಾರ ಮಹಾಶಬ್ದದಿಂದ ಕೂಗಿದನು. ಅವನು ಕೂಗಿದಾಗ ಏಳು ಗುಡುಗುಗಳು ತಮ್ಮ ಧ್ವನಿಕೊಟ್ಟವು.
4. ಆ ಏಳು ಗುಡುಗುಗಳು ತಮ್ಮ ಧ್ವನಿಕೊಟ್ಟಾಗ ನಾನು ಬರೆಯ ಬೇಕೆಂದಿದ್ದೆನು. ಅದಕ್ಕೆ–ಆ ಏಳು ಗುಡುಗುಗಳು ನುಡಿದವುಗಳನ್ನು ನೀನು ಬರೆಯದೆ ಮುದ್ರಿಸು ಎಂದು ಪರಲೋಕದಿಂದ ಬಂದ ಶಬ್ದವು ನನಗೆ ಹೇಳುವದನ್ನು ಕೇಳಿದೆನು.
5. ಅನಂತರ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತಿದ್ದ ದೂತನನ್ನು ನಾನು ಕಂಡೆನು. ಅವನು ತನ್ನ ಕೈಯನ್ನು ಪರಲೋಕದ ಕಡೆಗೆ ಎತ್ತಿ–
6. ಪರಲೋಕವನ್ನೂ ಅದರಲ್ಲಿರುವವುಗಳನ್ನೂ ಭೂಮಿಯನ್ನೂ ಅದರಲ್ಲಿರುವವುಗಳನ್ನೂ ಸಮುದ್ರ ವನ್ನೂ ಅದರಲ್ಲಿರುವವುಗಳನ್ನೂ ಸೃಷ್ಟಿಸಿ ಯುಗ ಯುಗಾಂತರಗಳಲ್ಲಿ ಜೀವಿಸುವಾತನ ಮೇಲೆ ಆಣೆ ಯಿಟ್ಟು ಇನ್ನು ಸಮಯವಿರುವದಿಲ್ಲ ಎಂತಲೂ
7. ಏಳನೆಯ ದೂತನು ಶಬ್ದಮಾಡುವ ದಿನಗಳಲ್ಲಿ ಅಂದರೆ ಅವನು ತುತೂರಿಯನ್ನು ಊದುವದಕ್ಕೆ ಪ್ರಾರಂಭಿಸು ವಾಗ ದೇವರ ರಹಸ್ಯವನ್ನು ತನ್ನ ಸೇವಕರಾದ ಪ್ರವಾದಿ ಗಳಿಗೆ ತಿಳಿಸಿದ್ದ ಪ್ರಕಾರ ಸಮಾಪ್ತಿಯಾಗತಕ್ಕದ್ದು ಎಂತಲೂ ಹೇಳಿದನು.
8. ಪರಲೋಕದಿಂದ ನನಗೆ ಕೇಳಿಸಿದ್ದ ಶಬ್ದವು ತಿರಿಗಿ ನನ್ನೊಂದಿಗೆ ಮಾತನಾಡಿ–ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತುಕೊಂಡಿರುವ ದೂತನ ಕೈಯಲ್ಲಿರುವ ತೆರೆದಿದ್ದ ಆ ಚಿಕ್ಕ ಪುಸ್ತಕವನ್ನು ತೆಗೆದುಕೋ ಎಂದು ಹೇಳಿತು.
9. ನಾನು ಆ ದೂತನ ಬಳಿಗೆ ಹೋಗಿ ಅವನಿಗೆ–ಆ ಚಿಕ್ಕ ಪುಸ್ತಕವನ್ನು ನನಗೆ ಕೊಡು ಎಂದು ಹೇಳಲು ಅವನು ನನಗೆ–ನೀನು ಇದನ್ನು ತೆಗೆದು ಕೊಂಡು ತಿಂದುಬಿಡು, ಇದು ನಿನ್ನ ಹೊಟ್ಟೆಯನ್ನು ಕಹಿಯಾಗುವಂತೆ ಮಾಡುವದು, ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವದು ಎಂದು ಹೇಳಿ ದನು
10. ಆಗ ನಾನು ಆ ಚಿಕ್ಕ ಪುಸ್ತಕವನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು; ಅದನ್ನು ತಿಂದ ಕೂಡಲೆ ನನ್ನ ಹೊಟ್ಟೆಯು ಕಹಿ ಯಾಯಿತು.
11. ಅವನು ನನಗೆ–ನೀನು ಅನೇಕ ಪ್ರಜೆ, ಜನಾಂಗ, ಭಾಷೆ ಮತ್ತು ರಾಜರುಗಳ ಮುಂದೆ ತಿರಿಗಿ ಪ್ರವಾದಿಸತಕ್ಕದ್ದು ಎಂದು ಹೇಳಿದನು.
About ಪ್ರಕಟನೆ Chapter 10
Read ಪ್ರಕಟನೆ Chapter 10 online from the Holy Bible. This chapter is part of the Book of ಪ್ರಕಟನೆ in the New Testament. Continue reading with the chapter navigation above or explore the complete book.
Book Information
Book: ಪ್ರಕಟನೆ
Chapter: 10
Testament: New Testament
How to Read this Chapter
Use the Previous and Next Chapter buttons to continue reading ಪ್ರಕಟನೆ. You can also adjust the font size for comfortable reading and browse other books of the Bible using the navigation links.
More Resources
Continue Reading the Bible
Continue reading ಪ್ರಕಟನೆ Chapter 10 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is ಪ್ರಕಟನೆ Chapter 10?
ಪ್ರಕಟನೆ Chapter 10 is part of the Book of ಪ್ರಕಟನೆ in the Holy Bible.
Can I read this chapter online?
Yes. You can read the complete ಪ್ರಕಟನೆ Chapter 10 online for free with easy chapter navigation.
More Chapters from ಪ್ರಕಟನೆ
- ಪ್ರಕಟನೆ Chapter 5
- ಪ್ರಕಟನೆ Chapter 6
- ಪ್ರಕಟನೆ Chapter 1
- ಪ್ರಕಟನೆ Chapter 17
- ಪ್ರಕಟನೆ Chapter 4
- ಪ್ರಕಟನೆ Chapter 12
- ಪ್ರಕಟನೆ Chapter 11
Explore More from ಹೊಸ ಒಡಂಬಡಿಕೆ
- ಅಪೊಸ್ತಲರ ಕೃತ್ಯಗಳು Chapter 18
- ಪ್ರಕಟನೆ Chapter 11
- ಅಪೊಸ್ತಲರ ಕೃತ್ಯಗಳು Chapter 9
- 1 ಪೇತ್ರನು Chapter 5
- 2 ಕೊರಿಂಥದವರಿಗೆ Chapter 5
- ಯೋಹಾನನು Chapter 11
- ಮತ್ತಾಯನು Chapter 1