Read ಪ್ರಕಟನೆ Chapter 14 Online
Read ಪ್ರಕಟನೆ Chapter 14 online from the Holy Bible. This chapter is part of the Book of ಪ್ರಕಟನೆ in the New Testament. Browse every verse with easy chapter navigation, continue to the next chapter, or explore the complete Book of ಪ್ರಕಟನೆ and the Holy Bible online.
Choose a Chapter
ಪ್ರಕಟನೆ 14
ಅಧ್ಯಾಯ 14
1. ಆಗ ಇಗೋ, ಕುರಿಮರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರು ವದನ್ನು ನಾನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ ಇದ್ದರು; ಅವರ ಹಣೆಗಳ ಮೇಲೆ ಆತನ ತಂದೆಯ ಹೆಸರು ಬರೆಯ ಲ್ಪಟ್ಟಿತು.
2. ಇದಲ್ಲದೆ ಪರಲೋಕದ ಕಡೆಯಿಂದ ಬಹಳ ನೀರುಗಳಂತೆಯೂ ಮಹಾಗುಡುಗಿನಂತೆಯೂ ಇದ್ದ ಶಬ್ದವನ್ನು ನಾನು ಕೇಳಿದೆನು. ತಮ್ಮ ವೀಣೆಗಳನ್ನು ಬಾರಿಸುತ್ತಿದ್ದ ವೀಣೆಗಾರರ ಸ್ವರವನ್ನೂ ನಾನು ಕೇಳಿದೆನು.
3. ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡಿನಂತಿದ್ದ ಹಾಡನ್ನು ಅವರು ಹಾಡಿದರು. ಭೂ ಲೋಕದೊಳಗಿಂದ ವಿಮೋಚಿಸಲ್ಪಟ್ಟ ಆ ಲಕ್ಷದ ನಾಲ್ವತ್ತು ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು.
4. ಸ್ತ್ರೀಯ ರೊಂದಿಗೆ ಮಲಿನರಾಗದವರು ಇವರೇ. ಯಾಕಂದರೆ ಇವರು ಕನ್ನಿಕೆಯರು. ಕುರಿಮರಿಯಾದಾತನು ಎಲ್ಲಿಗೆ ಹೋದರೂ ಆತನ ಹಿಂದೆ ಹೋಗುವವರು ಇವರೇ. ದೇವರಿಗೂ ಕುರಿಮರಿಯಾದಾತನಿಗೂ ಪ್ರಥಮ ಫಲ ವಾಗಿರುವ ಇವರು ಮನುಷ್ಯರೊಳಗಿಂದ ವಿಮೋಚಿಸ ಲ್ಪಟ್ಟವರು.
5. ಇವರ ಬಾಯಲ್ಲಿ ವಂಚನೆ ಸಿಕ್ಕಲಿಲ್ಲ; ಯಾಕಂದರೆ ಇವರು ದೇವರ ಸಿಂಹಾಸನದ ಮುಂದೆ ನಿರ್ದೋಷಿಗಳಾಗಿದ್ದಾರೆ.
6. ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜನಾಂಗ ಕ್ಕೂ ಕುಲದವರಿಗೂ ಭಾಷೆಯವರಿಗೂ ಮತ್ತು ಜನ ರಿಗೂ ಸಾರುವದಕ್ಕೆ ನಿತ್ಯವಾದ ಸುವಾರ್ತೆ ಇದ್ದ ಇನ್ನೊಬ್ಬ ದೂತನು ಆಕಾಶದ ಮಧ್ಯದಲ್ಲಿ ಹಾರುವದನ್ನು ನಾನು ಕಂಡೆನು.
7. ಅವನು–ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ; ಯಾಕಂದರೆ ಆತನು ನ್ಯಾಯತೀರ್ಪು ಮಾಡುವ ಗಳಿಗೆ ಬಂದದೆ; ಪರಲೋಕವನ್ನೂ ಭೂ ಲೋಕವನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟು ಮಾಡಿದಾತನನ್ನೇ ಆರಾಧಿಸಿರಿ ಎಂದು ಮಹಾ ಶಬ್ದದಿಂದ ಹೇಳಿದನು.
8. ಅವನ ಹಿಂದೆ ಇನ್ನೊಬ್ಬ ದೂತನು ಬಂದು–ಬಾಬೆಲೆಂಬ ಆ ಮಹಾನಗರಿಯು ಬಿದ್ದಳು, ಬಿದ್ದಳು; ಯಾಕಂದರೆ ಅವಳು ತನ್ನ ಜಾರತ್ವವೆಂಬ ಕೋಪದ ದ್ರಾಕ್ಷಾರಸವನ್ನು ಸಕಲ ಜನಾಂಗಗಳು ಕುಡಿಯುವಂತೆ ಮಾಡಿದಳು ಎಂದು ಹೇಳಿದನು.
9. ತರುವಾಯ ಮೂರನೆಯ ದೂತನು ಅವರನ್ನು ಹಿಂಬಾಲಿಸಿ–ಯಾರಾದರೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ ತನ್ನ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿ ಕೊಂಡರೆ
10. ಅಂಥವನು ದೇವರ ಕೋಪವೆಂಬ ಪಾತ್ರೆ ಯಲ್ಲಿ ಏನೂ ಬೆರಸದೆ ಹಾಕಿದ ಆತನ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೂತರ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದ ಮತ್ತು ಗಂಧಕದಿಂದ ಯಾತನೆಪಡು ವನು.
11. ಅವರ ಯಾತನೆಯ ಹೊಗೆಯು ಯುಗ ಯುಗಾಂತರಗಳಲ್ಲಿ ಏರುತ್ತಿರುವದು. ಆ ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡುವವರೂ ಅದರ ಹೆಸರಿನ ಗುರುತನ್ನು ಹಾಕಿಸಿಕೊಂಡಿರುವವರೂ ಹಗಲಿ ರುಳು ವಿಶ್ರಾಂತಿಯಿಲ್ಲದೆ ಇರುವರು ಎಂದು ಮಹಾ ಶಬ್ದದಿಂದ ಹೇಳಿದನು.
12. ದೇವರ ಆಜ್ಞೆ ಗಳನ್ನೂ ಯೇಸುವಿನ ಮೇಲಣ ನಂಬಿಕೆಯನ್ನೂ ಕಾಪಾಡುವ ಪರಿಶುದ್ಧರ ತಾಳ್ಮೆಯು ಇದರಲ್ಲಿ ಇರುತ್ತದೆ.
13. ಪರಲೋಕದಿಂದ ಬಂದ ಶಬ್ದವನ್ನು ನಾನು ಕೇಳಿ ದೆನು. ಅದು–ಇಂದಿನಿಂದ ಕರ್ತನಲ್ಲಿ ಯಾರಾರು ಸಾಯುವರೋ ಆ ಸತ್ತವರು ಧನ್ಯರು ಎಂಬದಾಗಿ ಬರೆ ಎಂದು ನನಗೆ ಹೇಳಿತು; ಹೌದು, ಅವರು ತಮ್ಮ ಪ್ರಯಾಸಗಳಿಂದ ವಿಶ್ರಮಿಸಿಕೊಳ್ಳುವರು, ಅವರ ಕ್ರಿಯೆಗಳು ಅವರನ್ನು ಹಿಂಬಾಲಿಸುತ್ತವೆ ಎಂದು ಆತ
14. ಆಗ ಒಂದು ಬಿಳೀ ಮೇಘವನ್ನೂ ಆ ಮೇಘದ ಮೇಲೆ ಮನುಷ್ಯ ಕುಮಾರನಂತಿದ್ದ ಒಬ್ಬಾತನು ಕೂತಿರುವುದನ್ನೂ ನಾನು ಕಂಡೆನು; ಆತನ ತಲೆಯ ಮೇಲೆ ಬಂಗಾರದ ಕಿರೀಟವಿತ್ತು; ಆತನ ಕೈಯಲ್ಲಿ ಹದವಾದ ಕುಡುಗೋಲು ಇತ್ತು.
15. ಆಗ ಮತ್ತೊಬ್ಬ ದೂತನು ಆಲಯದೊಳಗಿಂದ ಬಂದು ಮೇಘದ ಮೇಲೆ ಕೂತಿದ್ದಾತನಿಗೆ–ನಿನಗೆ ಕೊಯ್ಯುವ ಕಾಲ ಬಂದಿರುವದರಿಂದ ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ; ಯಾಕಂದರೆ ಭೂಮಿಯ ಪೈರು ಮಾಗಿದೆ ಎಂದು ಮಹಾಶಬ್ದದಿಂದ ಕೂಗಿದನು.
16. ಮೇಘದ ಮೇಲೆ ಕೂತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದನು; ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.
17. ಮತ್ತೊಬ್ಬ ದೂತನು ಪರಲೋಕದಲ್ಲಿರುವ ದೇವಾಲಯದೊಳಗಿಂದ ಬಂದನು; ಅವನಲ್ಲಿಯೂ ಹದವಾದ ಕುಡುಗೋಲು ಇತ್ತು.
18. ಬೆಂಕಿಯ ಮೇಲೆ ಅಧಿಕಾರವಿದ್ದ ಇನ್ನೊಬ್ಬ ದೂತನು ಯಜ್ಞವೇದಿಯ ಬಳಿಯಿಂದ ಬಂದು ಆ ಹದವಾದ ಕುಡುಗೋಲು ಇದ್ದವನಿಗೆ–ನಿನ್ನ ಹದವಾದ ಕುಡುಗೋಲನ್ನು ಹಾಕಿ ಭೂಮಿಯ ದ್ರಾಕ್ಷೇ ಗೊಂಚಲುಗಳನ್ನು ಕೂಡಿಸು; ಯಾಕಂದರೆ ಅದರ ಹಣ್ಣುಗಳು ಪೂರಾ ಮಾಗಿವೆ ಎಂದು ಮಹಾಶಬ್ದದಿಂದ ಕೂಗಿ ಹೇಳಿದನು.
19. ಆಗ ಆ ದೂತನು ತನ್ನ ಕುಡುಗೋಲನ್ನು ಭೂಮಿಗೆ ಹಾಕಿ ಭೂಮಿಯ ದ್ರಾಕ್ಷೇಹಣ್ಣನ್ನು ಕೂಡಿಸಿ ದೇವರ ರೌದ್ರದ ದೊಡ್ಡ ದ್ರಾಕ್ಷೇತೊಟ್ಟಿಯಲ್ಲಿ ಹಾಕಿದನು.
20. ಆ ದ್ರಾಕ್ಷೇ ತೊಟ್ಟಿಯನ್ನು ಪಟ್ಟಣದ ಹೊರಗೆ ತುಳಿದರು. ಆ ತೊಟ್ಟಿಯೊಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಇನ್ನೂರು ಮೈಲಿ ದೂರ ಹರಿಯಿತು.
About ಪ್ರಕಟನೆ Chapter 14
Read ಪ್ರಕಟನೆ Chapter 14 online from the Holy Bible. This chapter is part of the Book of ಪ್ರಕಟನೆ in the New Testament. Continue reading with the chapter navigation above or explore the complete book.
Book Information
Book: ಪ್ರಕಟನೆ
Chapter: 14
Testament: New Testament
How to Read this Chapter
Use the Previous and Next Chapter buttons to continue reading ಪ್ರಕಟನೆ. You can also adjust the font size for comfortable reading and browse other books of the Bible using the navigation links.
More Resources
Continue Reading the Bible
Continue reading ಪ್ರಕಟನೆ Chapter 14 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is ಪ್ರಕಟನೆ Chapter 14?
ಪ್ರಕಟನೆ Chapter 14 is part of the Book of ಪ್ರಕಟನೆ in the Holy Bible.
Can I read this chapter online?
Yes. You can read the complete ಪ್ರಕಟನೆ Chapter 14 online for free with easy chapter navigation.
More Chapters from ಪ್ರಕಟನೆ
- ಪ್ರಕಟನೆ Chapter 5
- ಪ್ರಕಟನೆ Chapter 6
- ಪ್ರಕಟನೆ Chapter 1
- ಪ್ರಕಟನೆ Chapter 17
- ಪ್ರಕಟನೆ Chapter 4
- ಪ್ರಕಟನೆ Chapter 12
- ಪ್ರಕಟನೆ Chapter 11
Explore More from ಹೊಸ ಒಡಂಬಡಿಕೆ
- ಮತ್ತಾಯನು Chapter 11
- 2 ತಿಮೊಥೆಯನಿಗೆ Chapter 1
- 1 ಕೊರಿಂಥದವರಿಗೆ Chapter 12
- ಅಪೊಸ್ತಲರ ಕೃತ್ಯಗಳು Chapter 19
- 1 ಕೊರಿಂಥದವರಿಗೆ Chapter 1
- ಲೂಕನು Chapter 18
- ಅಪೊಸ್ತಲರ ಕೃತ್ಯಗಳು Chapter 6