Read ಯೋಬನು Chapter 32 Online
Read ಯೋಬನು Chapter 32 online from the Holy Bible. This chapter is part of the Book of ಯೋಬನು in the Old Testament. Browse every verse with easy chapter navigation, continue to the next chapter, or explore the complete Book of ಯೋಬನು and the Holy Bible online.
Choose a Chapter
ಯೋಬನು 32
ಅಧ್ಯಾಯ 32
1. ಆಗ ಆ ಮೂರು ಜನರು ಯೋಬನಿಗೆ ಉತ್ತರ ಕೊಡುವದನ್ನು ಬಿಟ್ಟರು; ಯಾಕಂ ದರೆ ಅವನು ತನ್ನ ದೃಷ್ಟಿಗೆ ನೀತಿವಂತನಾಗಿದ್ದನು.
2. ಆಗ ರಾಮನ ಬಂಧುವಾದ ಬೂಜ್ನಾದ ಬರಕೇಲನ ಮಗನಾದ ಎಲೀಹುವಿನ ಕೋಪ ಯೋಬನ ಮೇಲೆ ಉರಿಯಿತು, ಅವನು ದೇವರಿಗಿಂತ ತನ್ನನ್ನು ನೀತಿವಂತ ನೆಂದು ಸ್ಥಾಪಿಸಿದ್ದರಿಂದ ಅವನ ಕೋಪ ಉರಿಯಿತು.
3. ಅವನ ಮೂವರು ಸ್ನೇಹಿತರ ಮೇಲೆಯೂ ಅವರು ಉತ್ತರ ಕಂಡುಕೊಳ್ಳದೆ ಯೋಬನನ್ನು ಖಂಡಿಸಿದ್ದರಿಂದ ಅವನ ಕೋಪ ಉರಿಯಿತು.
4. ಆಗ ಎಲೀಹುಯೋ ಬನ ಮಾತುಗಳು ಮುಗಿಯುವ ವರೆಗೂ ಕಾದು ಕೊಂಡನು;
5. ಅವರು ತನಗಿಂತ ಹಿರಿಯರಾಗಿದ್ದರು. ಆ ಮೂವರ ಬಾಯಲ್ಲಿ ಏನೂ ಉತ್ತರವಿಲ್ಲವೆಂದು ಎಲೀಹು ನೋಡಿದಾಗ ಅವನ ಕೋಪ ಉರಿಯಿತು.
6. ಆಗ ಬೂಜ್ನಾದ ಬರಕೇಲನ ಮಗನಾದ ಎಲೀಹು ಉತ್ತರಕೊಟ್ಟು ಹೇಳಿದ್ದೇನೆಂದರೆ–ನಾನು ಒಳ್ಳೇಪ್ರಾಯದವನು, ನೀವು ನೆರೆಯವರು; ಆದದ ರಿಂದ ನಾನು ಹೆದರಿ ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವದಕ್ಕೆ ಭಯಪಟ್ಟೆನು.
7. ದಿನ ಗತಿಸಿದವರು ಮಾತನಾಡಲಿ, ಬಹಳ ವರುಷದವರು ಜ್ಞಾನವನ್ನು ಬೋಧಿಸಲಿ ಅಂದೆನು.
8. ಆದರೆ ಮನುಷ್ಯನಲ್ಲಿ ಆತ್ಮ ಉಂಟು; ಸರ್ವಶಕ್ತನ ಶ್ವಾಸವು ಅವನಿಗೆ ಗ್ರಹಿಕೆ ಕೊಡುತ್ತದೆ.
9. ದೊಡ್ಡ ಮನುಷ್ಯರೇ ಬುದ್ಧಿವಂತರಲ್ಲ; ಮುದುಕರೇ ನ್ಯಾಯವನ್ನು ಗ್ರಹಿಸಿಕೊಳ್ಳುವವರಲ್ಲ.
10. ಆದದರಿಂದ ನನ್ನನ್ನು ಕೇಳು; ನನ್ನ ಅಭಿಪ್ರಾಯವನ್ನು ನಾನು ತಿಳಿಸುವೆನು ಅಂದೆನು.
11. ಇಗೋ, ನಿಮ್ಮ ಮಾತುಗಳಿಗೋಸ್ಕರ ನಾನು ಎದುರು ನೋಡಿದೆನು; ನೀವು ಏನು ಹೇಳಬೇಕೆಂದು ಹುಡುಕುತ್ತಿದ್ದಾಗ, ನಿಮ್ಮ ವಿವಾದಗಳಿಗೆ ಕಿವಿಗೊಟ್ಟೆನು;
12. ಆದರೆ ಇಗೋ, ಯೋಬನನ್ನು ಮನಗಾಣಿಸುವವನೂ ಅವನ ಮಾತು ಗಳಿಗೆ ಉತ್ತರ ಕೊಡುವವನೂ ನಿಮ್ಮಲ್ಲಿ ಒಬ್ಬನೂ ಇಲ್ಲ.
13. ನಾವು ಜ್ಞಾನವನ್ನು ಕಂಡುಕೊಂಡೆವು; ಮನು ಷ್ಯನಲ್ಲ, ದೇವರು ಅವನನ್ನು ತಳ್ಳುತ್ತಾನೆಂದು ಹೇಳ ಬೇಡಿರಿ.
14. ನನಗೆ ವಿರೋಧವಾಗಿ ಅವನು ನುಡಿ ಗಳನ್ನು ಸಿದ್ಧಮಾಡಲಿಲ್ಲ; ನಿಮ್ಮ ಮಾತುಗಳಿಂದ ನಾನು ಅವನಿಗೆ ಉತ್ತರ ಕೊಡುವದಿಲ್ಲ.
15. ಅವರು ವಿಸ್ಮಯಗೊಂಡು ಇನ್ನು ಉತ್ತರ ಕೊಡ ಲಿಲ್ಲ; ಅವರು ಮಾತನಾಡುವದನ್ನು ನಿಲ್ಲಿಸಿದರು.
16. ಅವರು ಮಾತನಾಡದೇ ಇರುವದರಿಂದ ನಾನು ಎದುರು ನೋಡಿದೆನು; ಯಾಕಂದರೆ ಇನ್ನೂ ಉತ್ತರ ಕೊಡದೆ ನಿಂತಿದ್ದಾರೆ.
17. ನಾನು ನನ್ನ ಪಾಲಾಗಿ ಉತ್ತರ ಕೊಡುವೆನು: ನಾನೇ ನನ್ನ ಅಭಿಪ್ರಾಯ ತಿಳಿಸುವೆನು.
18. ವಿಷಯಗಳಿಂದ ನಾನು ತುಂಬಿದ್ದೇನೆ: ನನ್ನೊಳಗಿನ ಆತ್ಮವು ನನ್ನನ್ನು ಇರಿಕಿಸುತ್ತದೆ.
19. ಇಗೋ, ನನ್ನ ಹೊಟ್ಟೆಯು ತೆರೆಯಲ್ಪಡದ ದ್ರಾಕ್ಷಾರಸದ ಹಾಗೆಯೂ ಒಡೆದು ಹೋಗುವ ಹೊಸ ಬುದ್ದಲಿಗಳ ಹಾಗೆಯೂ ಅದೆ.
20. ನಾನು ಚೈತನ್ಯಗೊಳ್ಳುವಂತೆ ಮಾತನಾಡು ವೆನು: ನನ್ನ ತುಟಿಗಳನ್ನು ತೆರೆದು ಉತ್ತರ ಕೊಡು ವೆನು.
21. ನಾನು ಯಾವ ಮನುಷ್ಯನ ಮುಖದಾಕ್ಷಿಣ್ಯ ನೋಡೆನು, ಇಲ್ಲವೆ ಮನುಷ್ಯನನ್ನು ಹೊಗಳೆನು.
22. ಹೊಗಳುವದನ್ನು ಅರಿಯೆನು; ಸ್ವಲ್ಪ ಕಾಲದಲ್ಲಿ ನನ್ನ ನಿರ್ಮಾಣಿಕನು ನನ್ನನ್ನು ಒಯ್ಯುವನೇನೋ?
About ಯೋಬನು Chapter 32
Read ಯೋಬನು Chapter 32 online from the Holy Bible. This chapter is part of the Book of ಯೋಬನು in the Old Testament. Continue reading with the chapter navigation above or explore the complete book.
Book Information
Book: ಯೋಬನು
Chapter: 32
Testament: Old Testament
How to Read this Chapter
Use the Previous and Next Chapter buttons to continue reading ಯೋಬನು. You can also adjust the font size for comfortable reading and browse other books of the Bible using the navigation links.
More Resources
Continue Reading the Bible
Continue reading ಯೋಬನು Chapter 32 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is ಯೋಬನು Chapter 32?
ಯೋಬನು Chapter 32 is part of the Book of ಯೋಬನು in the Holy Bible.
Can I read this chapter online?
Yes. You can read the complete ಯೋಬನು Chapter 32 online for free with easy chapter navigation.