ಮೀಕ Chapter 2

For English

Read ಮೀಕ Chapter 2 Online

Read ಮೀಕ Chapter 2 online from the Holy Bible. This chapter is part of the Book of ಮೀಕ in the Old Testament. Browse every verse with easy chapter navigation, continue to the next chapter, or explore the complete Book of ಮೀಕ and the Holy Bible online.

Choose a Chapter

ಮೀಕ 2

ಅಧ್ಯಾಯ 2

1. ಅಪರಾಧವನ್ನು ಯೋಚಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡಿಸುವವರಿಗೆ ಅಯ್ಯೋ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ; ಅದು ಅವರ ಕೈವಶದಲ್ಲಿದೆ.

2. ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತಕ್ಕೊಳ್ಳುತ್ತಾರೆ; ಮನೆಗಳನ್ನು ಸಹ ತೆಗೆದುಕೊಳ್ಳುತ್ತಾರೆ; ಮನುಷ್ಯನಿಗೂ ಅವನ ಮನೆಗೂ ಹೌದು, ಮನುಷ್ಯನಿಗೂ ಅವನ ಸ್ವಾಸ್ತ್ಯಕ್ಕೂ ಬಲಾತ್ಕಾರ ಮಾಡುತ್ತಾರೆ.

3. ಆದದರಿಂದ ಕರ್ತನು ಹೇಳುವದೇನಂದರೆ–ಇಗೋ, ನಾನು ಈ ಕುಟುಂಬಕ್ಕೆ ವಿರೋಧವಾಗಿ ಕೆಟ್ಟದ್ದನ್ನು ಯೋಚಿಸು ತ್ತೇನೆ; ಆದದರಿಂದ ನೀವು ನಿಮ್ಮ ಕುತ್ತಿಗೆಗಳನ್ನು ಹಿಂತೆ ಗೆಯದೆ ಅಹಂಕಾರವಾಗಿ ನಡೆಯದೆ ಇರುವಿರಿ; ಇದು ಕೆಟ್ಟಕಾಲವೇ.

4. ಆ ದಿನದಲ್ಲಿ ನಿಮ್ಮ ವಿಷಯವಾಗಿ ಸಾಮ್ಯವನ್ನೆತ್ತಿ ದುಃಖವುಳ್ಳ ಗೋಳಾಟವನ್ನು ಮಾಡಿ ಹೇಳುವದೇನಂದರೆ–ನಾವು ಪೂರ್ಣವಾಗಿ ಹಾಳಾ ದೆವು; ಅವನು ನನ್ನ ಜನರ ಪಾಲನ್ನು ಬದಲಾಯಿಸಿ ದ್ದಾನೆ; ಅವನು ಅದನ್ನು ನನ್ನಿಂದ ಹಿಂತೆಗೆದದ್ದು ಹೇಗೆ? ಹಿಂತಿರುಗಿ ಅವನು ನಮ್ಮ ಹೊಲಗಳನ್ನು ಹಂಚಿಕೊಟ್ಟಿ ದ್ದಾನೆ.

5. ಆದದರಿಂದ ಕರ್ತನ ಸಭೆಯಲ್ಲಿ ಪಾಲಿಗಾಗಿ ನೂಲು ಹಾಕುವವನು ನಿನಗೆ ಒಬ್ಬನೂ ಇರುವದಿಲ್ಲ.

6. ಪ್ರವಾದಿಸಬೇಡಿರೆಂದು ಪ್ರವಾದಿಸುವವರಿಗೆ ಅನ್ನು ತ್ತಾರೆ; ಅವರಿಗೆ ಆತನು ಪ್ರವಾದಿಸನು, ಆದರೆ ಅವರು ನಾಚಿಕೆಪಡುವದಿಲ್ಲ.

7. ಯಾಕೋಬಿನ ಮನೆತನದವ ರೆಂದು ಹೆಸರುಗೊಂಡವರೇ, ಕರ್ತನ ಆತ್ಮವು ಕಡಿಮೆ ಯಾಯಿತೋ? ಇವು ಆತನ ಕ್ರಿಯೆಗಳೋ? ಯಥಾ ರ್ಥವಾಗಿ ನಡೆಯುವವನಿಗೆ ನನ್ನ ಮಾತುಗಳು ಒಳ್ಳೇದನ್ನು ಮಾಡುವದಿಲ್ಲವೋ?

8. ಇತ್ತೀಚೆಗೆ ನನ್ನ ಜನರು ವೈರಿಯ ಹಾಗೆ ಎದ್ದಿದ್ದಾರೆ; ಯುದ್ಧದಿಂದ ತಿರುಗಿಕೊಂಡು ಭದ್ರವಾಗಿ ಹಾದುಹೋಗುವವರ ವಸ್ತ್ರದ ಸಂಗಡ ನಿಲುವಂಗಿಯನ್ನು ನೀವು ಕಿತ್ತುಕೊ ಳ್ಳುತ್ತೀರಿ.

9. ನನ್ನ ಜನರ ಸ್ತ್ರೀಯರನ್ನು ಅವರ ರಮ್ಯ ವಾದ ಮನೆಗಳೊಳಗಿಂದ ಹೊರಡಿಸಿದ್ದೀರಿ; ಅವರ ಮಕ್ಕಳಿಂದ ನನ್ನ ಮಹಿಮೆಯನ್ನು ಎಂದೆಂದಿಗೂ ತೆಗೆದಿ ದ್ದೀರಿ.

10. ನೀವು ಎದ್ದು ಹೋಗಿರಿ; ಇದು ನಿಮ್ಮ ವಿಶ್ರಾಂತಿ ಅಲ್ಲ; ಇದು ಅಶುದ್ಧವಾಗಿದ್ದ ಕಾರಣ, ನಿಮ್ಮನ್ನು ಕಠಿಣವಾದ ನಾಶನದಿಂದ ನಾಶಮಾಡು ವದು.

11. ಒಬ್ಬನು ಆತ್ಮದಲ್ಲಿಯೂ ವಂಚನೆಯಲ್ಲಿಯೂ ನಡೆದು ಸುಳ್ಳು ಹೇಳಿ–ನಿನಗೆ ದ್ರಾಕ್ಷಾರಸವನ್ನೂ ಮತ್ತಾಗುವದನ್ನೂ ಕುರಿತು ಪ್ರವಾದಿಸುವೆನೆಂದು ಹೇಳಿ ದರೆ, ಇವನೇ ಈ ಜನರಿಗೆ ಪ್ರವಾದಿಯಾಗಿರುವನು.

12. ಯಾಕೋಬೇ ನಿನ್ನವರನ್ನೆಲ್ಲಾ ನಿಶ್ಚಯವಾಗಿ ಕೂಡಿಸುವೆನು; ಇಸ್ರಾಯೇಲಿನಲ್ಲಿ ಉಳಿದವರನ್ನು ನಿಶ್ಚಯವಾಗಿ ಕೂಡಿಸುವೆನು, ಬೊಚ್ರದ ಕುರಿಗ ಳಂತೆಯೂ ತಮ್ಮ ಹಟ್ಟಿಯ ನಡುವೆ ಇರುವ ಮಂದೆ ಯಂತೆಯೂ ಅವರನ್ನು ಒಟ್ಟಾಗಿ ಕೂಡಿಡುವೆನು; ಬಹುಮಂದಿಯಾಗಿರುವ ಕಾರಣ ಅವರು ಮಹಾ ಶಬ್ದ ಮಾಡುವರು.

13. ಒಡೆಯುವವನು ಅವರ ಮುಂದೆ ಬಂದಿದ್ದಾನೆ; ಅವರು ಬಾಗಲನ್ನು ಒಡೆದು ಅದರಿಂದ ಹಾದುಹೋಗಿದ್ದಾರೆ; ಅವರ ಅರಸನು ಅವರ ಮುಂದೆ ಹಾದುಹೋಗುತ್ತಾನೆ; ಕರ್ತನು ಅವರಿಗೆ ಮುಂದಾಗಿರುವನು.

About ಮೀಕ Chapter 2

Read ಮೀಕ Chapter 2 online from the Holy Bible. This chapter is part of the Book of ಮೀಕ in the Old Testament. Continue reading with the chapter navigation above or explore the complete book.

Book Information

Book: ಮೀಕ
Chapter: 2
Testament: Old Testament

How to Read this Chapter

Use the Previous and Next Chapter buttons to continue reading ಮೀಕ. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಮೀಕ Chapter 2 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಮೀಕ Chapter 2?

ಮೀಕ Chapter 2 is part of the Book of ಮೀಕ in the Holy Bible.

Can I read this chapter online?

Yes. You can read the complete ಮೀಕ Chapter 2 online for free with easy chapter navigation.

More Chapters from ಮೀಕ

  1. ಮೀಕ Chapter 7
  2. ಮೀಕ Chapter 6
  3. ಮೀಕ Chapter 1
  4. ಮೀಕ Chapter 5
  5. ಮೀಕ Chapter 3
  6. ಮೀಕ Chapter 4

Explore More from ಹಳೆಯ ಒಡಂಬಡಿಕೆ

  1. ಯೆಶಾಯ Chapter 59
  2. ನೀತಿವಚನಗಳು Chapter 28
  3. ಕೀರ್ತನೆಗಳು Chapter 111
  4. 2 ಪೂರ್ವಕಾಲವೃತ್ತಾಂತ Chapter 30
  5. ಅರಣ್ಯಕಾಂಡ Chapter 24
  6. ಆದಿಕಾಂಡ Chapter 46
  7. 2 ಪೂರ್ವಕಾಲವೃತ್ತಾಂತ Chapter 25

Related Chapters & Readings

  1. ಅರಣ್ಯಕಾಂಡ Chapter 29
  2. 1 ಅರಸುಗಳು Chapter 1
  3. ನೀತಿವಚನಗಳು Chapter 28
  4. ಕೀರ್ತನೆಗಳು Chapter 139
  5. ಎಜ್ರನು Chapter 10
  6. ಕೀರ್ತನೆಗಳು Chapter 24
  7. ಯೆರೆಮೀಯ Chapter 52
Share Your Love

Leave a Reply

Your email address will not be published. Required fields are marked *