ಪರಮಗೀತೆ Chapter 4

For English

Read ಪರಮಗೀತೆ Chapter 4 Online

Read ಪರಮಗೀತೆ Chapter 4 online from the Holy Bible. This chapter is part of the Book of ಪರಮಗೀತೆ in the Old Testament. Browse every verse with easy chapter navigation, continue to the next chapter, or explore the complete Book of ಪರಮಗೀತೆ and the Holy Bible online.

Choose a Chapter

ಪರಮಗೀತೆ 4

ಅಧ್ಯಾಯ 4

1. ಇಗೋ, ನನ್ನ ಪ್ರಿಯಳೇ, ನೀನು ಸುಂದರಿಯು! ಇಗೋ, ನೀನು ಸುಂದರಿಯು! ನಿನ್ನ ಮುಸುಕಿನೊಳಗೆ ನಿನಗೆ ಪಾರಿವಾಳದ ಕಣ್ಣುಗ ಳಿವೆ. ನಿನ್ನ ಕೂದಲು ಗಿಲ್ಯಾದಿನ ಪರ್ವತದಲ್ಲಿ ಕಾಣ ಲ್ಪಡುವ ಮೇಕೆ ಮಂದೆಯ ಹಾಗೆ ಇದೆ.

2. ನಿನ್ನ ಹಲ್ಲುಗಳು ತೊಳೆಯಲ್ಪಟ್ಟು ಮೇಲಕ್ಕೆ ಬರುವ ಉಣ್ಣೆ ಕತ್ತರಿಸಿದ ಕುರಿಮಂದೆಗೆ ಸಮಾನವಾಗಿವೆ; ಅವೆಲ್ಲಾ ಅವಳಿ ಜವಳಿ ಈಯುತ್ತವೆ; ಅವುಗಳಲ್ಲಿ ಒಂದೂ ಬಂಜೆಯಾಗಿರದು.

3. ನಿನ್ನ ತುಟಿಗಳು ಕೆಂಪು ದಾರದ ಹಾಗೆ ಅವೆ; ನಿನ್ನ ಮಾತು ರಮ್ಯವಾದದ್ದು; ನಿನ್ನ ಕೆನ್ನೆಯು ಮುಸುಕಿನೊಳಗೆ ವಿಭಾಗಿಸಿದ ದಾಳಿಂಬರ ಹಣ್ಣಿನ ಹಾಗೆ ಇದೆ.

4. ನಿನ್ನ ಕುತ್ತಿಗೆ ದಾವೀದನ ಆಯುಧ ಶಾಲೆಗೋಸ್ಕರ ಕಟ್ಟಿಸಲ್ಪಟ್ಟ ಬುರುಜಿನ ಹಾಗೆ ಇದೆ; ಅದರಲ್ಲಿ ಸಾವಿರ ಗುರಾಣಿಗಳು ತೂಗ ಹಾಕಿವೆ; ಅವುಗಳೆಲ್ಲಾ ಪರಾಕ್ರಮಶಾಲಿಗಳ ಡಾಲುಗಳು.

5. ನಿನ್ನ ಎರಡು ಸ್ತನಗಳು ತಾವರೆ ಹೂವುಗಳಲ್ಲಿ ಮೇಯುವ ಅವಳಿ ಜವಳಿಯಾದ ಎರಡು ಜಿಂಕೆಯ ಮರಿಗಳ ಹಾಗೆ ಅವೆ.

6. ಉದಯವಾಗುವ ವರೆಗೂ ನೆರಳುಗಳು ಓಡಿಹೋಗುವ ವರೆಗೂ ನಾನು ರಕ್ತಬೋಳದ ಪರ್ವತಕ್ಕೂ ಸಾಂಬ್ರಾಣಿಯ ಗುಡ್ಡಕ್ಕೂ ಹೋಗುವೆನು.

7. ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿಯು, ನಿನ್ನಲ್ಲಿ ಕಳಂಕವೇನೂ ಇಲ್ಲ.

8. ನನ್ನ ಸಂಗಡ ಲೆಬನೋನಿನಿಂದ ಬಾ, ಪತ್ನಿಯೇ; ಲೆಬನೋನಿನಿಂದ ನನ್ನ ಸಂಗಡ ಬಾ. ಅಮಾನದ ಶಿಖರದಿಂದ, ಶೆನೀರ್‌, ಹೆರ್ಮೋನ್‌ ಶಿಖರದಿಂದ, ಸಿಂಹದ ಗವಿಗಳಿಂದ, ಚಿರತೆಗಳ ಪರ್ವತಗಳಿಂದ ದೃಷ್ಟಿಸು.

9. ನನ್ನ ಹೃದಯವನ್ನು ನೀನು ಸೆಳಕೊಂಡಿದ್ದೀ. ನನ್ನ ಸಹೋದರಿಯೇ, ವಧುವೇ, ನಿನ್ನ ಕಣ್ಣುಗಳ ಏಕದೃಷ್ಟಿಯಿಂದಲೂ ನಿನ್ನ ಕೊರಳಲ್ಲಿರುವ ಒಂದು ಕಂಠಮಾಲೆಯಿಂದಲೂ ನನ್ನ ಹೃದಯವನ್ನು ನೀನು ಸೆಳಕೊಂಡಿದ್ದೀ.

10. ನಿನ್ನ ಪ್ರೀತಿಯು ಎಷ್ಟೋ ಚಂದ! ನನ್ನ ಸಹೋದರಿಯೇ, ವಧುವೇ, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! ಎಲ್ಲಾ ಸುಗಂಧ ಗಳಿಗಿಂತ ನಿನ್ನ ತೈಲಗಳ ವಾಸನೆಯು ಎಷ್ಟೋ ಉತ್ತಮ!

11. ನಿನ್ನ ತುಟಿಗಳು, ಓ ನನ್ನ ವಧುವೇ, ಜೇನುಗೂಡಿನ ಹಾಗೆ ಸುರಿಯುತ್ತವೆ; ಹಾಲೂ ಜೇನೂ ನಿನ್ನ ನಾಲಿಗೆಯ ಕೆಳಗೆ ಅವೆ; ನಿನ್ನ ವಸ್ತ್ರಗಳ ವಾಸನೆಯು ಲೆಬನೋನಿನ ವಾಸನೆಯ ಹಾಗೆ ಅವೆ.

12. ನನ್ನ ಸಹೋದರಿಯು, ಪತ್ನಿಯು, ಮುಚ್ಚಲ್ಪಟ್ಟ ತೋಟವೂ ಮುಚ್ಚಲ್ಪಟ್ಟ ಒರತೆಯೂ ಮುದ್ರೆ ಹಾಕಲ್ಪಟ್ಟ ಬುಗ್ಗೆಯೂ ಆಗಿದ್ದಾಳೆ.

13. ನಿನ್ನ ಗಿಡಗಳಲ್ಲಿ ದಾಳಿಂಬರದ ವನವೂ ರಮ್ಯವಾದ ಫಲಕೊಡುವ ಗಿಡಗಳೂ ಕರ್ಪೂರವೂ ಜಟಾಮಾಂಸಿಯೂ ಕೂಡ ಇವೆ.

14. ಜಟಾಮಾಂಸಿಯೂ– ಕೇಸರಿಯೂ ಬಜೆಯೂ ಲವಂಗವೂ ಎಲ್ಲಾ ಸಾಂಬ್ರಾಣಿ ಗಿಡಗಳೂ ರಕ್ತಬೋಳವೂ ಅಗರೂ

15. ಸಮಸ್ತ ಮುಖ್ಯವಾದ ಸುಗಂಧದ್ರವ್ಯ ಗಳೂ ತೋಟಗಳ ಬುಗ್ಗೆಯೂ ಜೀವಜಲಗಳ ಬಾವಿಯೂ ಲೆಬನೋನಿನಿಂದ ಹರಿಯುವ ಕಾಲುವೆ ಗಳೂ ನಿನ್ನಲ್ಲಿ ಇವೆ.

16. ಓ ಉತ್ತರ ಗಾಳಿಯೇ, ಎಚ್ಚರವಾಗು! ದಕ್ಷಿಣ ಗಾಳಿಯೇ, ಬಾ! ನನ್ನ ತೋಟದ ಮೇಲೆ ಬೀಸು; ಅದರ ಸುಗಂಧಗಳು ಹರಿಯಲಿ. ನನ್ನ ಪ್ರಿಯನು ತನ್ನ ತೋಟದಲ್ಲಿ ಬಂದು ತನ್ನ ರಮ್ಯವಾದ ಫಲಗ ಳನ್ನು ತಿನ್ನಲಿ.

About ಪರಮಗೀತೆ Chapter 4

Read ಪರಮಗೀತೆ Chapter 4 online from the Holy Bible. This chapter is part of the Book of ಪರಮಗೀತೆ in the Old Testament. Continue reading with the chapter navigation above or explore the complete book.

Book Information

Book: ಪರಮಗೀತೆ
Chapter: 4
Testament: Old Testament

How to Read this Chapter

Use the Previous and Next Chapter buttons to continue reading ಪರಮಗೀತೆ. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಪರಮಗೀತೆ Chapter 4 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಪರಮಗೀತೆ Chapter 4?

ಪರಮಗೀತೆ Chapter 4 is part of the Book of ಪರಮಗೀತೆ in the Holy Bible.

Can I read this chapter online?

Yes. You can read the complete ಪರಮಗೀತೆ Chapter 4 online for free with easy chapter navigation.

More Chapters from ಪರಮಗೀತೆ

  1. ಪರಮಗೀತೆ Chapter 5
  2. ಪರಮಗೀತೆ Chapter 8
  3. ಪರಮಗೀತೆ Chapter 3
  4. ಪರಮಗೀತೆ Chapter 1
  5. ಪರಮಗೀತೆ Chapter 6
  6. ಪರಮಗೀತೆ Chapter 7
  7. ಪರಮಗೀತೆ Chapter 2

Explore More from ಹಳೆಯ ಒಡಂಬಡಿಕೆ

  1. ಕೀರ್ತನೆಗಳು Chapter 81
  2. ಕೀರ್ತನೆಗಳು Chapter 106
  3. ನೀತಿವಚನಗಳು Chapter 3
  4. ಮೀಕ Chapter 7
  5. ಎಸ್ತೇರಳು Chapter 1
  6. ಕೀರ್ತನೆಗಳು Chapter 91
  7. ಕೀರ್ತನೆಗಳು Chapter 46

Related Chapters & Readings

  1. ಜೆಕರ್ಯ Chapter 14
  2. ಕೀರ್ತನೆಗಳು Chapter 48
  3. ಯೆಶಾಯ Chapter 56
  4. ಯೋಬನು Chapter 6
  5. 1 ಕೊರಿಂಥದವರಿಗೆ Chapter 13
  6. 2 ಅರಸುಗಳು Chapter 12
  7. ಆದಿಕಾಂಡ Chapter 24
Share Your Love

Leave a Reply

Your email address will not be published. Required fields are marked *