2 ಸಮುವೇಲನು Chapter 12

For English

Read 2 ಸಮುವೇಲನು Chapter 12 Online

Read 2 ಸಮುವೇಲನು Chapter 12 online from the Holy Bible. This chapter is part of the Book of 2 ಸಮುವೇಲನು in the Old Testament. Browse every verse with easy chapter navigation, continue to the next chapter, or explore the complete Book of 2 ಸಮುವೇಲನು and the Holy Bible online.

Choose a Chapter

A+ A A-

2 ಸಮುವೇಲನು 12

ಅಧ್ಯಾಯ 12

1. ಕರ್ತನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ಅವನು ಅವನ ಬಳಿಗೆ ಬಂದು ಹೇಳಿದ್ದೇನಂದರೆ–ಒಂದು ಪಟ್ಟಣದಲ್ಲಿ ಇಬ್ಬರು ಮನುಷ್ಯರಿದ್ದರು; ಒಬ್ಬನು ಐಶ್ವರ್ಯವಂತನು, ಮತ್ತೊಬ್ಬನು ಬಡವನು.

2. ಐಶ್ವರ್ಯವಂತನಿಗೆ ಕುರಿ ಪಶುಗಳು ಬಹಳವಾಗಿದ್ದವು.

3. ಆದರೆ ಬಡವನಿಗೆ ತಾನು ಕೊಂಡುಕೊಂಡ ಒಂದು ಚಿಕ್ಕ ಹೆಣ್ಣುಕುರಿ ಮರಿಯ ಹೊರತು ಬೇರೇನೂ ಇರಲಿಲ್ಲ. ಅದು ಅವನ ಸಂಗಡವೂ ಅವನ ಮಕ್ಕಳ ಸಂಗಡವೂ ಬೆಳೆದು ಅವನೊಡನೆ ಆಹಾರ ತಿಂದು ಅವನ ಪಾತ್ರೆಯಲ್ಲಿ ಕುಡಿದು ಅವನ ಮಗ್ಗುಲಲ್ಲಿ ಮಲಗಿಕೊಂಡು ಅವನಿಗೆ ಕುಮಾರ್ತೆಯ ಹಾಗಿತ್ತು.

4. ಐಶ್ವರ್ಯವುಳ್ಳ ಆ ಮನು ಷ್ಯನ ಬಳಿಗೆ ಒಬ್ಬ ಪ್ರಯಾಣಿಕನು ಬಂದಾಗ ಪ್ರಯಾಣ ಮಾಡುವವನಿಗೆ ಅಡಿಗೆಯನ್ನು ಮಾಡಿಸುವದಕ್ಕೆ ತನ್ನ ಕುರಿ ಪಶುಗಳಲ್ಲಿ ಒಂದನ್ನೂ ತಕ್ಕೊಳ್ಳ ಮನಸ್ಸಿಲ್ಲದೆ ಆ ಬಡವನ ಕುರಿಯನ್ನು ತಕ್ಕೊಂಡು ಅದನ್ನು ತನ್ನ ಬಳಿಗೆ ಬಂದ ಆ ಮನುಷ್ಯನಿಗೆ ಅಡಿಗೆಯನ್ನು ಮಾಡಿಸಿ ದನು ಅಂದನು.

5. ಆಗ ದಾವೀದನು ಆ ಮನುಷ್ಯನ ಮೇಲೆ ಬಹಳ ಕೋಪಿಸಿಕೊಂಡು ನಾತಾನನಿಗೆ–ಕರ್ತನ ಜೀವದಾಣೆ, ಇದನ್ನು ಮಾಡಿದ ಆ ಮನುಷ್ಯನು ನಿಜವಾಗಿಯೂ ಸಾಯಬೇಕು.

6. ಅವನು ಕರುಣೆ ಯಿಲ್ಲದೆ ಈ ಕಾರ್ಯವನ್ನು ಮಾಡಿದ್ದರಿಂದ ಆ ಕುರಿ ಗೋಸ್ಕರ ನಾಲ್ಕರಷ್ಟು ತಿರಿಗಿ ಕೊಡಬೇಕು ಅಂದನು.

7. ಆಗ ನಾತಾನನು ದಾವೀದನಿಗೆ–ನೀನೇ ಆ ಮನು ಷ್ಯನು. ಇಸ್ರಾಯೇಲಿನ ದೇವರಾದ ಕರ್ತನು–ನಾನು ನಿನ್ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಮಾಡಿ ನಿನ್ನನ್ನು ಸೌಲನ ಕೈಗೆ ತಪ್ಪಿಸಿಬಿಟ್ಟು

8. ನಿನ್ನ ಯಜಮಾನನ ಮನೆಯನ್ನೂ ನಿನ್ನ ಯಜಮಾನನ ಹೆಂಡತಿಯರನ್ನೂ ನಿನ್ನ ಎದೆಗೆ ಕೊಟ್ಟು ಇಸ್ರಾಯೇಲಿನ ಮನೆಯನ್ನೂ ಯೆಹೂದದ ಮನೆಯನ್ನೂ ನಿನಗೆ ಕೊಟ್ಟೆನು.

9. ಇದು ಸಾಲದೆ ಇದ್ದರೆ ಇಂಥಿಂಥವುಗಳನ್ನು ನಿನಗೆ ಇನ್ನೂ ಕೊಡುತ್ತಿದ್ದೆನು. ನೀನು ಕರ್ತನ ದೃಷ್ಟಿಗೆ ಈ ಕೆಟ್ಟಕಾರ್ಯವನ್ನು ಮಾಡುವ ಹಾಗೆ ಆತನ ಆಜ್ಞೆ ಯನ್ನು ತಿರಸ್ಕರಿಸಿದ್ದೇನು? ನೀನು ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿ ಯನ್ನು ನಿನಗೆ ಹೆಂಡತಿಯಾಗಿ ತೆಗೆದುಕೊಂಡಿ; ಇದಲ್ಲದೆ ಅವನನ್ನು ಅಮ್ಮೋನನ ಮಕ್ಕಳ ಕತ್ತಿಯಿಂದ ಕೊಂದು ಹಾಕಿಸಿದಿ.

10. ಈಗ ನೀನು ನನ್ನನ್ನು ತಿರಸ್ಕರಿಸಿ ಹಿತ್ತಿಯ ನಾದ ಊರೀಯನ ಹೆಂಡತಿಯನ್ನು ನಿನಗೆ ಹೆಂಡತಿ ಯಾಗಿ ತೆಗೆದುಕೊಂಡದ್ದರಿಂದ ಕತ್ತಿಯು ಎಂದಿಗೂ ನಿನ್ನ ಮನೆಯನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳುತ್ತಾನೆ.

11. ಕರ್ತನು–ಇಗೋ, ನಾನು ನಿನ್ನ ಮನೆಯಲ್ಲಿ ಕೆಟ್ಟದ್ದನ್ನು ನಿನಗೆ ವಿರೋಧವಾಗಿ ಏಳುವಂತೆ ಮಾಡಿ ನಿನ್ನ ಕಣ್ಣುಗಳ ಮುಂದೆ ನಿನ್ನ ಹೆಂಡತಿಯರನ್ನು ತೆಗೆದು ನಿನ್ನ ನೆರೆಯವನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಸಂಗಡ ಮಲಗುವನು.

12. ನೀನು ಅದನ್ನು ಮರೆಯಲ್ಲಿ ಮಾಡಿದಿ; ಆದರೆ ನಾನು ಈ ಕಾರ್ಯವನ್ನು ಇಸ್ರಾಯೇಲ್ಯರೆಲ್ಲರ ಮುಂದೆಯೂ ಸೂರ್ಯನ ಮುಂದೆಯೂ ಮಾಡುವೆನು ಅಂದನು.

13. ಆಗ ದಾವೀದನು ನಾತಾನನಿಗೆ–ನಾನು ಕರ್ತನಿಗೆ ವಿರೋಧವಾಗಿ ಪಾಪಮಾಡಿದೆನು ಅಂದನು. ನಾತಾನನು ದಾವೀದನಿಗೆ–ನೀನು ಸಾಯದಹಾಗೆ ಕರ್ತನು ನಿನ್ನ ಪಾಪವನ್ನು ಪರಿಹರಿಸಿದನು.

14. ಹೇಗಿ ದ್ದರೂ ಈ ಕಾರ್ಯದಿಂದ ನೀನು ಕರ್ತನ ಶತ್ರುಗಳಿಗೆ ಬಹಳವಾಗಿ ದೇವದೂಷಣೆ ಮಾಡುವಂತೆ ಆಸ್ಪದ ಕೊಟ್ಟ ಕಾರಣ ನಿನಗೆ ಹುಟ್ಟಿದ ಮಗುವು ಸಹ ನಿಶ್ಚಯ ವಾಗಿ ಸಾಯುವದು ಅಂದನು.

15. ಆಗ ನಾತಾನನು ತನ್ನ ಮನೆಗೆ ಹೋದನು.

16. ಕರ್ತನು–ಊರೀಯನ ಹೆಂಡತಿಯು ದಾವೀದ ನಿಗೆ ಹೆತ್ತ ಕೂಸನ್ನು ಹೊಡೆದನು. ಅದು ಬಹಳ ಅಸ್ವಸ್ಥವಾಯಿತು. ದಾವೀದನು ಕೂಸಿಗೋಸ್ಕರ ದೇವ ರನ್ನು ಬೇಡಿಕೊಂಡನು. ಇದಲ್ಲದೆ ದಾವೀದನು ಉಪ ವಾಸಮಾಡಿ ಒಳಗೆ ಹೋಗಿ ರಾತ್ರಿಯೆಲ್ಲಾ ನೆಲದ ಮೇಲೆ ಬಿದ್ದುಕೊಂಡಿದ್ದನು.

17. ಅವನನ್ನು ಎಬ್ಬಿಸುವದಕ್ಕೆ ಅವನ ಮನೆಯ ಹಿರಿಯರು ಅವನ ಬಳಿಗೆ ಬಂದರು; ಆದರೆ ಅವನಿಗೆ ಮನಸ್ಸಿಲ್ಲದೆ ಇತ್ತು. ಅವರ ಸಂಗಡ ಭೋಜನ ಮಾಡದೆ ಹೋದನು.

18. ಮಗುವು ಏಳನೇ ದಿವಸ ಸತ್ತುಹೋಯಿತು. ಆಗ ಮಗುವು ಸತ್ತು ಹೋಯಿತೆಂದು ದಾವೀದನ ಸೇವಕರು ಅವನಿಗೆ ತಿಳಿ ಸುವದಕ್ಕೆ ಭಯಪಟ್ಟರು. ಯಾಕಂದರೆ ಇಗೋ, ಮಗುವು ಇನ್ನೂ ಬದುಕಿರುವಾಗ ನಾವು ಅವನ ಸಂಗಡ ಮಾತನಾಡುವಾಗ ಅವನು ನಮ್ಮ ಮಾತನ್ನು ಕೇಳದೆಹೋದನು. ಈಗ ಮಗುವು ಸತ್ತುಹೋಯಿ ತೆಂದು ನಾವು ಅವನಿಗೆ ಹೇಳಿದರೆ ಇನ್ನೂ ಎಷ್ಟು ಸಂಕಟಪಡುವನೋ ಅಂದುಕೊಂಡರು.

19. ಆದರೆ ತನ್ನ ಸೇವಕರು ಪಿಸುಗುಟ್ಟುವದನ್ನು ದಾವೀದನು ನೋಡಿ ಮಗುವು ಸತ್ತುಹೋಯಿತೆಂದು ಗ್ರಹಿಸಿ ಕೊಂಡನು. ಆಗ ದಾವೀದನು ತನ್ನ ಸೇವಕರಿಗೆ–ಮಗುವು ಸತ್ತುಹೋಯಿತೋ ಅಂದನು. ಅವರು –ಸತ್ತುಹೋಯಿತು ಅಂದರು.

20. ಆಗ ದಾವೀದನು ನೆಲದಿಂದ ಎದ್ದು ಸ್ನಾನಮಾಡಿ ತೈಲವನ್ನು ಹಚ್ಚಿಕೊಂಡ ವನಾಗಿ ಬದಲಿ ವಸ್ತ್ರಗಳನ್ನು ಧರಿಸಿಕೊಂಡು ಕರ್ತನ ಮಂದಿರಕ್ಕೆ ಹೋಗಿ ಆತನನ್ನು ಆರಾಧಿಸಿ ತನ್ನ ಮನೆಗೆ ಬಂದನು. ಅವನು ಕೇಳಿದಾಗ ಅವರು ಅವನ ಮುಂದೆ ಇಟ್ಟ ರೊಟ್ಟಿ ತಿಂದನು.

21. ಅವನ ಸೇವಕರು ಅವನಿಗೆ –ಇದೇನು ನೀನು ಮಾಡಿದ್ದು? ಮಗುವು ಜೀವದಿಂದ ಇರುವಾಗ ನೀನು ಉಪವಾಸವಾಗಿದ್ದು ಅದಕ್ಕೋಸ್ಕರ ಅಳುತ್ತಿದ್ದಿ; ಆದರೆ ಮಗುವು ಸತ್ತಮೇಲೆ ನೀನು ಎದ್ದು ರೊಟ್ಟಿಯನ್ನು ತಿಂದಿ ಅಂದರು.

22. ಅದಕ್ಕವನು–ಮಗುವು ಜೀವದಿಂದ ಇರುವಾಗ ಅದು ಬದುಕುವ ಹಾಗೆ ಕರ್ತನು ನನಗೆ ದಯಮಾಡುವನೇನೋ ಎಂದು ಉಪವಾಸಮಾಡಿ ಅತ್ತೆನು.

23. ಆದರೆ ಈಗ ಸತ್ತಿದೆ ಯಲ್ಲಾ; ನಾನು ಉಪವಾಸ ಮಾಡುವದು ಯಾಕೆ? ನಾನು ಅದನ್ನು ತಿರಿಗಿ ಬರಮಾಡಬಲ್ಲೆನೋ? ನಾನು ಅದರ ಬಳಿಗೆ ಹೋಗುವೆನು; ಆದರೆ ಅದು ನನ್ನ ಬಳಿಗೆ ತಿರಿಗಿ ಬರುವದಿಲ್ಲ ಅಂದನು.

24. ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಯನ್ನು ಆದರಿಸಿ ಅವಳ ಬಳಿಗೆ ಹೋಗಿ ಅವಳ ಸಂಗಡ ಮಲಗಿದನು.ಅವಳು ಒಬ್ಬ ಮಗನನ್ನು ಹೆತ್ತಳು. ಅವನಿಗೆ ಸೊಲೊಮೋನನೆಂದು ಹೆಸರಿಟ್ಟನು. ಕರ್ತನು ಅವ ನನ್ನು ಪ್ರೀತಿಮಾಡಿದನು.

25. ಪ್ರವಾದಿಯಾದ ನಾತಾ ನನ ಮುಖಾಂತರ ಕರ್ತನ ನಿಮಿತ್ತ ಅವನಿಗೆ ಯೆದೀದ್ಯ ನೆಂದು ಹೆಸರಿಟ್ಟನು.

26. ಯೋವಾಬನು ಅಮ್ಮೋನನ ಮಕ್ಕಳ ರಬ್ಬದ ಮೇಲೆ ಯುದ್ಧಮಾಡಿ ರಾಜ್ಯದ ಪಟ್ಟಣವನ್ನು ಹಿಡಿದನು.

27. ಯೋವಾಬನು ದಾವೀದನಿಗೆ–ನಾನು ರಬ್ಬದ ಮೇಲೆ ಯುದ್ಧಮಾಡಿ ನೀರುಗಳ ಪಟ್ಟಣವನ್ನು ಹಿಡಿದಿದ್ದೇನೆ.

28. ಈಗ ನಾನು ಪಟ್ಟಣವನ್ನು ಹಿಡಿದು ಅದು ನನ್ನ ಹೆಸರಿನಿಂದ ಕರೆಯಲ್ಪಡದ ಹಾಗೆ ನೀನು ಜನರನ್ನು ಕೂಡಿಸಿಕೊಂಡು, ಬಂದು ಪಟ್ಟಣವನ್ನು ಮುತ್ತಿಗೆ ಹಾಕಿ ಹಿಡಿ ಎಂದು ಹೇಳಿ ದೂತರನ್ನು ಕಳುಹಿಸಿದನು.

29. ಹಾಗೆಯೇ ದಾವೀದನು ಜನ ರೆಲ್ಲರನ್ನು ಕೂಡಿಸಿಕೊಂಡು ರಬ್ಬಕ್ಕೆ ಹೋಗಿ ಅದರ ಮೇಲೆ ಯುದ್ಧಮಾಡಿ ಅದನ್ನು ತೆಗೆದುಕೊಂಡನು.

30. ಅದರ ಅರಸನ ತಲೆಯಮೇಲೆ ಇದ್ದ ಕಿರೀಟವನ್ನು ತೆಗೆದುಕೊಂಡನು. ಅದು ಬಂಗಾರದ್ದಾಗಿ ಒಂದು ತಲಾಂತಿನ ತೂಕವಾಗಿತ್ತು; ರತ್ನಗಳಿಂದ ಕೆತ್ತಲ್ಪಟ್ಟಿತ್ತು. ಅದು ದಾವೀದನ ತಲೆಯ ಮೇಲೆ ಇರಿಸಲ್ಪಟ್ಟಿತು. ಇದಲ್ಲದೆ ಅವನು ಆ ಪಟ್ಟಣದಿಂದ ಬಹು ಅಧಿಕವಾಗಿ ಕೊಳ್ಳೆಯನ್ನು ತಂದನು.

31. ಆದರೆ ಅದರಲ್ಲಿದ್ದ ಜನರನ್ನು ಅವನು ಹೊರಗೆ ತಂದು ಅವರನ್ನು ಗರಗಸ ಸಲಿಕೆ ಕೊಡ್ಲಿಯ ಕೆಲಸಕ್ಕೂ ಇಟ್ಟಿಗೆ ಭಟ್ಟಿಯ ಕೆಲಸಕ್ಕೂ ಇಟ್ಟನು. ಈ ಪ್ರಕಾರವೇ ಅಮ್ಮೊನನ ಮಕ್ಕಳ ಎಲ್ಲಾ ಪಟ್ಟಣಗಳಿಗೂ ಮಾಡಿ ದಾವೀದನೂ ಜನರೆಲ್ಲರೂ ಯೆರೂಸಲೇಮಿಗೆ ತಿರಿಗಿ ಬಂದರು.

About 2 ಸಮುವೇಲನು Chapter 12

Read 2 ಸಮುವೇಲನು Chapter 12 online from the Holy Bible. This chapter is part of the Book of 2 ಸಮುವೇಲನು in the Old Testament. Continue reading with the chapter navigation above or explore the complete book.

Book Information

Book: 2 ಸಮುವೇಲನು
Chapter: 12
Testament: Old Testament

How to Read this Chapter

Use the Previous and Next Chapter buttons to continue reading 2 ಸಮುವೇಲನು. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading 2 ಸಮುವೇಲನು Chapter 12 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is 2 ಸಮುವೇಲನು Chapter 12?

2 ಸಮುವೇಲನು Chapter 12 is part of the Book of 2 ಸಮುವೇಲನು in the Holy Bible.

Can I read this chapter online?

Yes. You can read the complete 2 ಸಮುವೇಲನು Chapter 12 online for free with easy chapter navigation.

More Chapters from 2 ಸಮುವೇಲನು

  1. 2 ಸಮುವೇಲನು Chapter 8
  2. 2 ಸಮುವೇಲನು Chapter 11
  3. 2 ಸಮುವೇಲನು Chapter 4
  4. 2 ಸಮುವೇಲನು Chapter 3
  5. 2 ಸಮುವೇಲನು Chapter 24
  6. 2 ಸಮುವೇಲನು Chapter 17
  7. 2 ಸಮುವೇಲನು Chapter 14

Explore More from ಹಳೆಯ ಒಡಂಬಡಿಕೆ

  1. ಅರಣ್ಯಕಾಂಡ Chapter 25
  2. ಅರಣ್ಯಕಾಂಡ Chapter 26
  3. ಧರ್ಮೋಪದೇಶಕಾಂಡ Chapter 6
  4. ಅರಣ್ಯಕಾಂಡ Chapter 4
  5. ಕೀರ್ತನೆಗಳು Chapter 22
  6. ಯಾಜಕಕಾಂಡ Chapter 19
  7. ಅರಣ್ಯಕಾಂಡ Chapter 27

Related Chapters & Readings

  1. ಕೀರ್ತನೆಗಳು Chapter 130
  2. ಅಪೊಸ್ತಲರ ಕೃತ್ಯಗಳು Chapter 15
  3. ಗಲಾತ್ಯದವರಿಗೆ Chapter 2
  4. 1 ಸಮುವೇಲನು Chapter 2
  5. ಯೆಹೆಜ್ಕೇಲನು Chapter 22
  6. ಪ್ರಕಟನೆ Chapter 2
  7. ಕೀರ್ತನೆಗಳು Chapter 106
Share Your Love

Leave a Reply

Your email address will not be published. Required fields are marked *