Read ಯಾಜಕಕಾಂಡ Chapter 1 Online
Read ಯಾಜಕಕಾಂಡ Chapter 1 online from the Holy Bible. This chapter is part of the Book of ಯಾಜಕಕಾಂಡ in the Old Testament. Browse every verse with easy chapter navigation, continue to the next chapter, or explore the complete Book of ಯಾಜಕಕಾಂಡ and the Holy Bible online.
Choose a Chapter
ಯಾಜಕಕಾಂಡ 1
ಅಧ್ಯಾಯ 1
1. ಕರ್ತನು ಮೋಶೆಯನ್ನು ಕರೆದು ಸಭೆಯಗುಡಾರದೊಳಗಿಂದ ಅವನೊಂದಿಗೆ ಮಾತನಾಡಿ ಹೇಳಿದ್ದೇನಂದರೆ–
2. ಇಸ್ರಾಯೇಲ್ ಮಕ್ಕ ಳೊಂದಿಗೆ ಮಾತನಾಡಿ ಅವರಿಗೆ–ನಿಮ್ಮಲ್ಲಿ ಯಾವನಾ ದರೂ ಕರ್ತನಿಗೆ ಕಾಣಿಕೆಯನ್ನು ತರುವದಾದರೆ ನೀವು ನಿಮ್ಮ ಯಜ್ಞಗಳನ್ನು ಪಶುಗಳಿಂದಲೂ ಹಿಂಡು ಗಳಿಂದಲೂ ಮಂದೆಗಳಿಂದಲೂ ತರಬೇಕು.
3. ಅವನ ಯಜ್ಞವು ಹಿಂಡಿನ ದಹನಬಲಿಯಾಗಿದ್ದರೆ ಅವನು ದೋಷವಿಲ್ಲದ ಗಂಡನ್ನು ಅರ್ಪಿಸಲಿ; ಅವನು ಅದನ್ನು ತನ್ನ ಸ್ವಇಚ್ಛೆಯಿಂದ ಕರ್ತನ ಮುಂದೆ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಅರ್ಪಿಸಬೇಕು.
4. ಅವನು ತನ್ನ ಕೈಯನ್ನು ದಹನಬಲಿಯ ತಲೆಯ ಮೇಲೆ ಇಡಬೇಕು: ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವದು.
5. ಅವನು ಆ ಹೋರಿಯನ್ನು ಕರ್ತನ ಮುಂದೆ ವಧಿಸಬೇಕು; ಆಗ ಆರೋನನ ಕುಮಾರರಾದ ಯಾಜಕರು ರಕ್ತವನ್ನು ತಂದು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.
6. ಅವನು ಆ ದಹನಬಲಿಯ ಚರ್ಮವನ್ನು ಸುಲಿದು ಅದನ್ನು ತುಂಡುಗಳನ್ನಾಗಿ ಮಾಡಬೇಕು.
7. ಯಾಜಕನಾದ ಆರೋನನ ಕುಮಾ ರರು ಯಜ್ಞವೇದಿಯ ಮೇಲೆ ಬೆಂಕಿ ಇಟ್ಟು ಆ ಬೆಂಕಿಯ ಮೇಲೆ ಕ್ರಮವಾಗಿ ಕಟ್ಟಿಗೆಯನ್ನು ಇಡಬೇಕು.
8. ಆಗ ಆರೋನನ ಕುಮಾರರಾದ ಯಾಜಕರು ಅದರ ಭಾಗಗಳನ್ನು ಅಂದರೆ ತಲೆಯನ್ನೂ ಕೊಬ್ಬನ್ನೂ ಯಜ್ಞವೇದಿಯ ಮೇಲಿನ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು;
9. ಅದರ ಕರುಳುಗಳನ್ನೂ ಕಾಲುಗಳನ್ನೂ ಅವನು ನೀರಿನಲ್ಲಿ ತೊಳೆಯಬೇಕು; ಯಾಜಕನು ಎಲ್ಲವನ್ನೂ ಯಜ್ಞವೇದಿಯ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ ಕರ್ತನಿಗೆ ಸುವಾಸನೆಯಾಗು ವಂತೆಯೂ ಸುಡಬೇಕು.
10. ದಹನಬಲಿಗೋಸ್ಕರ ತನ್ನ ಕಾಣಿಕೆಯು ಮಂದೆ ಯಿಂದಾದರೆ ಅವನು ಕುರಿಯನ್ನಾಗಲಿ ಆಡನ್ನಾಗಲಿ ದೋಷವಿಲ್ಲದ ಒಂದು ಗಂಡನ್ನು ತರಬೇಕು.
11. ಅವನು ಅದನ್ನು ಯಜ್ಞವೇದಿಯ ಉತ್ತರದ ಕಡೆಯಲ್ಲಿ ಕರ್ತನ ಮುಂದೆ ವಧಿಸಬೇಕು. ಇದಲ್ಲದೆ ಆರೋನನ ಕುಮಾರ ರಾದ ಯಾಜಕರು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.
12. ಅವನು ಅದರ ತಲೆ ಮತ್ತು ಕೊಬ್ಬಿನೊಂದಿಗೆ ತುಂಡುಗಳನ್ನಾಗಿ ಮಾಡ ಬೇಕು. ಯಾಜಕನು ಅವುಗಳನ್ನು ಕ್ರಮವಾಗಿ ಯಜ್ಞ ವೇದಿಯ ಮೇಲಿನ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಇಡಬೇಕು.
13. ಆದರೆ ಅವನು ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು; ಆಗ ಯಾಜಕನು ಅವೆಲ್ಲವುಗಳನ್ನು ತಂದು ಯಜ್ಞವೇದಿಯ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿಯ ಹಾಗೆಯೂ ಕರ್ತನಿಗೆ ಸುವಾಸನೆ ಯಾಗುವಂತೆಯೂ ಸುಡಬೇಕು.
14. ಅವನು ಕರ್ತನಿಗೆ ಸಮರ್ಪಿಸುವ ದಹನಬಲಿಯು ಪಕ್ಷಿಗಳಾಗಿದ್ದರೆ ಅವನು ತನ್ನ ಯಜ್ಞಕ್ಕಾಗಿ ಬೆಳವಕ್ಕಿಯ ನ್ನಾಗಲಿ ಪಾರಿವಾಳದ ಮರಿಯನ್ನಾಗಲಿ ತರಬೇಕು.
15. ಆಗ ಯಾಜಕನು ಅದನ್ನು ಯಜ್ಞವೇದಿಯ ಬಳಿಗೆ ತಂದು ಅದರ ತಲೆಯನ್ನು ಮುರಿದು ಯಜ್ಞವೇದಿಯ ಮೇಲೆ ಸುಡಬೇಕು; ಅದರ ರಕ್ತವನ್ನು ಯಜ್ಞವೇದಿಯ ಹೊರಬದಿಯಲ್ಲಿ ಹಿಂಡಬೇಕು.
16. ಇದಲ್ಲದೆ ಅವನು ಅದರ ರೆಕ್ಕೆ (ಪುಕ್ಕ)ಗಳೊಂದಿಗೆ ಕರುಳುಗಳನ್ನೂ ಕಿತ್ತು ಯಜ್ಞವೇದಿಯ ಬಳಿ ಪೂರ್ವಭಾಗದಲ್ಲಿ ಬೂದಿ ಯಿರುವ ಸ್ಥಳದಲ್ಲಿ ಬಿಸಾಡಬೇಕು.
17. ಅವನು ಅದನ್ನು ರೆಕ್ಕೆಗಳೊಂದಿಗೆ ಹರಿಯಬೇಕು, ಆದರೆ ಬೇರೆಬೇರೆ ಯಾಗಿ ವಿಭಾಗಿಸಬಾರದು; ಆಗ ಯಾಜಕನು ಅದನ್ನು ಯಜ್ಞವೇದಿಯ ಬೆಂಕಿಮೇಲಿರುವ ಕಟ್ಟಿಗೆಯ ಮೇಲೆ ಸಮರ್ಪಿಸುವ ದಹನಬಲಿ ಹಾಗೆಯೂ ಕರ್ತನಿಗೆ ಸುವಾಸನೆಯಾಗುವಂತೆಯೂ ಸುಡಬೇಕು.
About ಯಾಜಕಕಾಂಡ Chapter 1
Read ಯಾಜಕಕಾಂಡ Chapter 1 online from the Holy Bible. This chapter is part of the Book of ಯಾಜಕಕಾಂಡ in the Old Testament. Continue reading with the chapter navigation above or explore the complete book.
Book Information
Book: ಯಾಜಕಕಾಂಡ
Chapter: 1
Testament: Old Testament
How to Read this Chapter
Use the Previous and Next Chapter buttons to continue reading ಯಾಜಕಕಾಂಡ. You can also adjust the font size for comfortable reading and browse other books of the Bible using the navigation links.
More Resources
Continue Reading the Bible
Continue reading ಯಾಜಕಕಾಂಡ Chapter 1 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is ಯಾಜಕಕಾಂಡ Chapter 1?
ಯಾಜಕಕಾಂಡ Chapter 1 is part of the Book of ಯಾಜಕಕಾಂಡ in the Holy Bible.
Can I read this chapter online?
Yes. You can read the complete ಯಾಜಕಕಾಂಡ Chapter 1 online for free with easy chapter navigation.
More Chapters from ಯಾಜಕಕಾಂಡ
- ಯಾಜಕಕಾಂಡ Chapter 24
- ಯಾಜಕಕಾಂಡ Chapter 23
- ಯಾಜಕಕಾಂಡ Chapter 17
- ಯಾಜಕಕಾಂಡ Chapter 16
- ಯಾಜಕಕಾಂಡ Chapter 11
- ಯಾಜಕಕಾಂಡ Chapter 10
- ಯಾಜಕಕಾಂಡ Chapter 27
Explore More from ಹಳೆಯ ಒಡಂಬಡಿಕೆ
- ನೆಹೆಮಿಯಾ Chapter 3
- ಯೋಬನು Chapter 24
- ಕೀರ್ತನೆಗಳು Chapter 102
- ಧರ್ಮೋಪದೇಶಕಾಂಡ Chapter 16
- ಧರ್ಮೋಪದೇಶಕಾಂಡ Chapter 31
- ಕೀರ್ತನೆಗಳು Chapter 105
- ಎಜ್ರನು Chapter 2